ನನ್ನ ಭಾಮೈದ ತಂಗಿಗೆ ಅಂತ ಅರಿಶಿನ ಕುಂಕುಮಕ್ಕೆ ಸೈಟು ಕೊಟ್ಟರೆ ವಿವಾದ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ

Krishnaveni K

ಮಂಗಳವಾರ, 22 ಅಕ್ಟೋಬರ್ 2024 (16:32 IST)
ಮೈಸೂರು: ನನ್ನ 42 ವರ್ಷದ ಸುದೀರ್ಘ ರಾಜಕಾರಣದಲ್ಲಿ ಎಂದಿಗೂ ಬಡವರಿಗೆ ಅನ್ಯಾಯ ಮಾಡಿಲ್ಲ, ಒಂದೇ ಒಂದು ರೂಪಾಯಿ ಲಂಡವೂ ಪಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ವರುಣಾದಲ್ಲಿ ಅಬ್ಬರಿಸಿದ್ದಾರೆ.

ನನ್ನ ಮೇಲೆ ಈಗ ಬಂದಿರುವ ಆರೋಪಗಳನ್ನು ಸಹಿಸುತ್ತೀರಾ ಎಂದು ತಮ್ಮ ಕ್ಷೇತ್ರದ ಜನರಿಗೆ ಪ್ರಶ್ನೆ ಮಾಡಿದ್ದಾರೆ. ವರುಣಾದಲ್ಲಿ ಇಂದು 501 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ರಾಜಕೀಯ ಜೀವನ ಸ್ವಚ್ಛವಾಗಿದೆ ಎಂದಿದ್ದಾರೆ.

ಸಾರ್ವಜನಿಕರಿಂದ ಹಣ ತೆಗೆದುಕೊಂಡಿದ್ದರೆ 9 ಚುನಾವಣೆ ಗೆಲ್ಲಲು ಸಾಧ್ಯವಾಗುತ್ತಿತ್ತಾ? ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ಯಾರು ಬೇಕಾದರೂ ಓದಬಹುದು. ನನ್ನ ಭಾಮೈದ ತಂಗಿಗೆ ಅರಿಶಿನ ಕುಂಕುಮಕ್ಕೆ ಕೊಟ್ಟ ಜಮೀನನ್ನೇ ವಿವಾದ ಮಾಡಿದರು. ಅದಕ್ಕೇ ನಿವೇಶನವನ್ನೇ ವಾಪಸ್ ಮಾಡಿದೆವು. 40 ವರ್ಷದಿಂದ ಶಾಸಕನಾಗಿದ್ದರೂ ನನಗೆ ಸ್ವಂತ ಮನೆಯಿಲ್ಲ. ಮೈಸೂರಿನಲ್ಲಿ ಮರಿಸ್ವಾಮಿ ಎಂಬವರ ಮನೆಯಲ್ಲಿದ್ದೇವೆ.  ಈಗಷ್ಟೇ ಸ್ವಂತ ಮನೆ ಕಟ್ಟಿಸುತ್ತಿದ್ದೇನೆ. ನೀವೇ ನನ್ನ ಮಾಲಿಕರು,ನೀವೇ ಯಜಮಾನರು, ನೀವೇ ಮಾತನಾಡಿ’ ಎಂದು ಸಿಎಂ ಹೇಳಿದ್ದಾರೆ.

ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿಯವರಿಗೆ ನನ್ನ ಕಂಡರೆ ಹೊಟ್ಟೆ ಉರಿ. ಅದಕ್ಕೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ಜಗ್ಗುವನನಲ್ಲ ನಾನು. ಕಾಯಾ ವಾಚಾ ಮನಸಾ ರಾಜಕಾರಣ ಮಾಡಿದ್ದೇನೆ. ನಾನು ಇರುವವರೆಗೂ ಬಡವರಿಗೆ ನ್ಯಾಯ ಒದಗಿಸುತ್ತೇನೆ’ ಎಂದು ವರುಣಾದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ