ಮೈತ್ರಿಯಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು

ಭಾನುವಾರ, 24 ಸೆಪ್ಟಂಬರ್ 2023 (18:20 IST)
ಜೆಡಿಎಸ್-ಬಿಜೆಪಿ ಮೈತ್ರಿ ಆಗುವುದು ಬಹುತೇಕ ಕನ್ಫರ್ಮ್ ಆಗಿದ್ದು, ಇದರಿಂದ ಯಾರಿಗೆ ಲಾಭ ಹಾಗೂ ಯಾರಿಗೆ ನಷ್ಟ ಎಂದು 2 ಪಕ್ಷಗಳ ವರಿಷ್ಠರು ಕೂಲಂಕುಷ ಚರ್ಚೆ ನಡೆಸಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಎರಡು ಸುತ್ತಿನ ಮಾತುಕತೆ ನಡೆಸಿರುವ ಜೆಡಿಎಸ್ ವರಿಷ್ಠರು, ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ.
 
ಮಂಡ್ಯ ಹಾಸನ,ಬೆ.ಗ್ರಾಮಾಂತರ, ಚಿಕ್ಕಬಳ್ಳಾಪುರ,ಕೋಲಾರ ತುಮಕೂರು ಕ್ಷೇತ್ರಗಳ ಹಂಚಿಕೆಗೆ ದೇವೇಗೌಡ್ರು ಹೆಚ್ಚು ಒತ್ತು ನೀಡಿದ್ದು, ಸಂಘಟನಾತ್ಮಕವಾಗಿ ಜೆಡಿಎಸ್ ಅಸ್ಥಿತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ. ಇನ್ನು, 5ಕ್ಕೂ ಹೆಚ್ಚು ಸ್ಥಾನ ಬಿಟ್ಟು ಕೊಡಲು ಜೆಡಿಎಸ್ ಪಟ್ಟು ಹಿಡಿದಿದ್ದು, ಬಿಜೆಪಿಯ ಆಪರೇಷನ್ ಸೌತ್ ಸಂಕಲ್ಪಕ್ಕೆ ಹಿನ್ನಡೆಯಾಗಲಿದೆ. ಜೊತೆಗೆ ಕಾಂಗ್ರೆಸ್‌ಗೆ ಪೈಪೋಟಿ ನೀಡುವಲ್ಲಿ ಹಿಂದುಳಿದಿರೋ ಬಿಜೆಪಿಗೆ ಮೈತ್ರಿಯಿಂದ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿದ್ದು, ಮೈತ್ರಿಯಿಂದ ಅಪರೇಷನ್ ಹಸ್ತಕ್ಕೂ ತಾತ್ಕಾಲಿಕ ಬ್ರೇಕ್ ಬೀಳಲಿದೆ. ಜೊತೆಗೆ ಹಳೇ ಮೈಸೂರಿನ‌ 8 ಕ್ಷೇತ್ರಗಳಲ್ಲಿ‌ ಪ್ರಭಾವ ಬೀರುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ