ಉಳುವಿ ಚನ್ನಬಸವೇಶ್ವರ ಜಾತ್ರೆಗೆ ದೇಗುಲದ ಟ್ರಸ್ಟಿಗಳ ವಿರೋಧ!

ಮಂಗಳವಾರ, 12 ಫೆಬ್ರವರಿ 2019 (18:40 IST)
ಉಳುವಿ ಚನ್ನಬಸವೇಶ್ವರ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳಿಂದ ವಿರೋಧ ವ್ಯಕ್ತವಾಗಿದೆ.

ಕಾರವಾರ ಜಿಲ್ಲೆ ಉಳುವಿ ಚನ್ನಬಸವೇಶ್ವರ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮುರುಘಾ ಶರಣರಿಂದ ಸುದ್ದಿಗೋಷ್ಠಿ ನಡೆಯಿತು. ಮುರುಘಾಮಠದ ಪರಂಪರೆ ಉಳಿಸುವಂತೆ ಮನವಿ ಮಾಡಿದ ಶ್ರೀಗಳು, ಜಯದೇವ, ಮಲ್ಲಿಕಾರ್ಜುನ ಶ್ರೀಗಳ ಕಾಲದಿಂದಲೂ ಉಳುವಿಯಲ್ಲಿ ಶಿವಾನುಭವ, ಪರಂಪರೆ ಉಳಿಸಿಕೊಂಡು ಬರಲಾಗಿದೆ.

ಉಳುವಿಯ ಚನ್ನಬಸವಣ್ಣನವರ ಜಾತ್ರೆಯಲ್ಲಿ ಲಕ್ಷಂತರ ಜನ ಭಾಗವಹಿಸುತ್ತಾರೆ.
ಈ ಜಾತ್ರೆಯಲ್ಲಿ ಜಂಗಮ ದಾಸೋಹ ಮುರುಘಾಮಠದ ಪ್ರಮುಖ ವೈಶಿಷ್ಟ್ಯವಾಗಿದೆ. ಕೆಲವು ಪಟ್ಟಬದ್ರ ಹಿತಾಸಕ್ತಿಗಳು ಮುರುಘಾ ಶರಣರ ಪರಂಪರೆಗೆ ವಿರೋಧಿಸಿದ್ದಾರೆ ಎಂದರು.

ದೇವಸ್ಥಾನದ ಕೆಲ ಟ್ರಸ್ಟಿಗಳು ಮಾಡಿಕೊಂಡಿರುವ ಕೌಟಂಬಿಕ ಸಮಿತಿಯನ್ನು ಶ್ರೀಗಳು ಪ್ರಶ್ನಿಸಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅದೇ ಕಾರಣಕ್ಕೆ ಚನ್ನಬಸವೇಶ್ವರ ಜಾತ್ರೆಯ ಚಾಲನೆಗೆ ವಿರೋಧ ಮಾಡುತ್ತಿದ್ದಾರೆ ಎಂದರು.

ಈ ವಿಚಾರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ನ್ಯಾಯಾಲಯದ ಆದೇಶದಂತೆ ಮುಂದುವರೆಯುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿಕೆ ನೀಡಿದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ