ಪುರಾಣ ಪ್ರಸಿದ್ಧ ಹೇಮಗಿರಿ ಜಾತ್ರೆ ಸಂಭ್ರಮ

ಸೋಮವಾರ, 4 ಫೆಬ್ರವರಿ 2019 (17:36 IST)
ಪುರಾಣ ಪ್ರಸಿದ್ಧ ಹೇಮಗಿರಿ ಜಾತ್ರೆಯಲ್ಲಿ ರಾಸುಗಳ ಕಲರವ ಎಂದಿಗಿಂತ ಈ ಬಾರಿ ಜೋರಾಗಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಜಾತ್ರೆಯಲ್ಲಿ ರಾಸುಗಳ ಕಲರವ ಜೋರಾಗಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ಲಕ್ಷಾಂತರ ರಾಸುಗಳು ತಮ್ಮ ಮಾಲೀಕರೊಂದಿಗೆ ಜಾತ್ರೆಯಲ್ಲಿವೆ. ‌‌ಭಾರೀ ಪೈಪೋಟಿಯಲ್ಲಿ ರಾಸುಗಳ ಮಾರಾಟವಾಗುತ್ತಿವೆ.

ಬಂಡಿಹೊಳೆ ಗ್ರಾಮದಲ್ಲಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವರ ಉತ್ಸವ ಮೂರ್ತಿಗೆ ಶಾಸಕ ಡಾ.ನಾರಾಯಣಗೌಡ ಮತ್ತು ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಂದ ವಿಶೇಷ ಪೂಜೆ ಸಲ್ಲಿಕೆಯಾಯಿತು.

ಕಲ್ಯಾಣ ವೆಂಕಟರಮಣಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂಡಿಹೊಳೆ ಗ್ರಾಮದಲ್ಲಿ ಮೆರವಣಿಗೆಯನ್ನು ತಹಶೀಲ್ದಾರ್ ಮತ್ತು ಶಾಸಕ ನಾರಾಯಣಗೌಡ ಮಾಡಿದರು. ಐದು ಲಕ್ಷ ರೂ.ಗಳಿಗೂ ಹೆಚ್ಚಿನ ಬೆಲೆಯ ರಾಸುಗಳು ಹೇಮಗಿರಿ ಜಾತ್ರೆಯಲ್ಲಿವೆ.ಜಾತ್ರಾ ಮಾಳಕ್ಕೆ ಶುದ್ಧ ಕುಡಿಯುವ ನೀರು ಮತ್ತು ಬೆಳಕಿನ ಸೌಲಭ್ಯವನ್ನು ತಾಲೂಕು ಆಡಳಿತ ಒದಗಿಸಿದ್ದು, ಫೆಬ್ರವರಿ 12ಕ್ಕೆ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ಬ್ರಹ್ಮರಥೋತ್ಸವ ನಡೆಯಲಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ