ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ತೀವ್ರ ವಿರೋಧ

ಬುಧವಾರ, 17 ಅಕ್ಟೋಬರ್ 2018 (18:54 IST)
ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪ್ರವೇಶ ಕಲ್ಪಿಸಿರುವುದು ಕೇರಳದಲ್ಲಿ ವಿವಾದ ಹಾಗೂ ಘರ್ಷಣೆಗಳು ಭುಗಿಲೇಳುವಂತೆ ಮಾಡಿದೆ.

ಹಿಂದುಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಪರ ಹಾಗೂ ವಿರೋಧದ ನಡುವೆಯೇ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಭೇಟಿ ನೀಡಿ ದರ್ಶನ ಪಡೆಯಲು ಕೇರಳ ಸರಕಾರ ಅವಕಾಶ ಕಲ್ಪಿಸಿದೆ.

ಹಲವು ಸಂಘಟನೆಗಳ ಪ್ರತಿಭಟನೆ ಹಾಗೂ ಕೆಲವೆಡೆ ಬಿಗಿಭದ್ರತೆ ನಡುವೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಹಾಗೂ ವಿರೋಧ ವ್ಯಕ್ತಪಡಿಸಿದ 500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ದೇವರ ನಾಡು ಕೇರಳದಲ್ಲಿ ಭಾರಿ ವಿರೋಧ ಹಾಗೂ ಚರ್ಚೆಗೆ ಈ ವಿಷಯ ಕಾರಣವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ