ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ನಮ್ಮ ಶ್ರಮ- ಪ್ರೀತಮ್ ಗೌಡ

ಭಾನುವಾರ, 26 ನವೆಂಬರ್ 2023 (16:00 IST)
ಯತ್ನಾಳ್, ಸೋಮಣ್ಣ ಅಸಮಾಧಾನ ವಿಚಾರವಾಗಿ ನಗರದಲ್ಲಿ ಹಾಸನದ ಮಾಜಿ ಶಾಸಕ ಪ್ರೀತಮ್ ಗೌಡ ಪ್ರತಿಕ್ರಿಯಿಸಿದ್ದಾರೆ.ರಾಜಕಾರಣದಲ್ಲಿ ಸೋಮಣ್ಣ, ಯತ್ನಾಳ್ ಹಿರಿಯರಿದ್ದಾರೆ.

ಜೆಡಿಎಸ್ ಜೊತೆ ಹೊಂದಾಣಿಕೆ ಆದಾಗ ಎಫೆಕ್ಟ್ ಆದ ವ್ಯಕ್ತಿ ಪ್ರೀತಮ್ ಗೌಡ ಮತ್ತೆ ಪ್ರಧಾನಮಂತ್ರಿ ಆಗಿ ಮೋದಿ ಆಗಬೇಕು ಅಂತ ಇಚ್ಚೆ ಪಟ್ಟಿದ್ದೇವೆ‌.ಅದಕ್ಕಾಗಿ ಒಟ್ಟಾಗಿ ಕೆಲಸ‌ ಮಾಡ್ತಿದ್ದೇವೆ.ಅದಕ್ಕೆ‌ ಸೋಮಣ್ಣ, ಯತ್ನಾಳ್ ಹೊರತಲ್ಲ.ಸೋಮಣ್ಣ ಮತ್ತು ಯತ್ನಾಳ್ ಕೂಡ ಮೋದಿ ಪ್ರಧಾನಿಯಾಗಿ ಆಗಬೇಕು ಅಂತ ಹೇಳಿದ್ದಾರೆ.ಕಾಲ‌ಕ್ರಮೇಣ ಎಲ್ಲವೂ ಸರಿಯಾಗಲಿದೆ.ಮೋದಿ ಅವರನ್ನ ಪ್ರಧಾನಮಂತ್ರಿ ಮಾಡೋಣ.ಲೋಕಸಭಾ ಚುನಾವಣೆಗೆ ಬಹಳ ಹೆಚ್ಚಿನ ಶಕ್ತಿಯನ್ನು ಸೋಮಣ್ಣ, ಯತ್ನಾಳ್ ಕೂಡ ಮಾಡ್ತಾರೆ ಎಂದು ಪ್ರೀತಮ್ ಗೌಡ ಹೇಳಿದ್ದಾರೆ.
 
ಕುಮಾರಸ್ವಾಮಿ ಮನೆಗೆ  ನೀವೂ ಭೇಟಿಯಾಗ್ತೀರಾ ಅನ್ನೋ ಪ್ರಶ್ನೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಭೇಟಿ ಮಾಡಿರಲಿಲ್ಲ.ಹಾಗಾಗಿ ಅವರು ಭೇಟಿಯಾಗಲು ಹೋಗ್ತಿದ್ದಾರೆ.ನಾನು ಹಾಸನಕ್ಕೆ ಕಾರ್ಯಕರ್ತ.ಹಾಸನಕ್ಕೆ ಮಾತ್ರ ಸೀಮಿತವಾಗಿರ್ತೇನೆ ಎಂದು ಪ್ರೀತಮ್ ಗೌಡ ಹೇಳಿದ್ದಾರೆ.
 
ಇನ್ನೂ ಯಡಿಯೂರಪ್ಪ ಅವರಿಗಾದ ಗತಿಯೇ ವಿಜಯೇಂದ್ರಗೆ ಆಗಲಿದೆ ಅನ್ನೋ ಸಚಿವ ತಿಮ್ಮಾಪುರ ಹೇಳಿಕೆ ವಿಚಾರವಾಗಿ ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ‌ ಆದ್ರು.ವಿಜಯೇಂದ್ರ ಕೂಡ ನಾಲ್ಕು ಬಾರಿ ಸಿಎಂ ಆಗ್ತಾರೆ.ಅಶ್ವಮೇಧ ಯಾಗ ಕುದುರೆ ಕಟ್ಟಿದ್ದಾರೆ.ಹರಕೆಯ ಕುರಿ ಯಾರು ಅನ್ನೋದು ಮುಂದೆ ಗೊತ್ತಾಗುತ್ತೆ.ವಿಜಯೇಂದ್ರ ಅವರ ಶಕ್ತಿ ಏನು, ರಾಜಕೀಯ ತಂತ್ರಗಾರಿಕೆ ಏನು ಅಂತ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ.ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಪ್ರೀತಮ್ ಗೌಡ ಕೂಡ ಒಬ್ಬ.ಕಾಲ‌ ಕ್ರಮೇಣ ಎಲ್ಲವೂ ಸರಿ ಹೋಗಲಿದೆ.ಅವರೆಲ್ಲರೂ ಹಿರಿಯರಿದ್ದಾರೆ.ಎಲ್ಲರೂ ಒಟ್ಟಾಗಿ ಲೋಕಸಭಾ ಚುನಾವಣೆಗೆ ಕೆಲಸ ಮಾಡುತ್ತಾರೆ ಎಂದು ಪ್ರೀತಮ್ ಗೌಡ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ