ನಮ್ಮ ಸರ್ಕಾರ ದಕ್ಷ ಅಧಿಕಾರಿಗಳಿಗೆ ಹುಡುಕಿ ಹುಡುಕಿ ಪೋಸ್ಟಿಂಗ್ ಹಾಕ್ತಿದೇವೆ-ರಾಮಲಿಂಗಾರೆಡ್ಡಿ

ಬುಧವಾರ, 28 ಜೂನ್ 2023 (15:01 IST)
ಈ ತಿಂಗಳ ವೇತನಕ್ಕೆ ಸಾರಿಗೆ ನಿಗಮದಲ್ಲಿ ಹಣ ಇಲ್ಲದಿರೋ ವಿಚಾರವಾಗಿ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು,ಸರ್ಕಾರದಿಂದ ನಮಗೆ ಮಹಿಳಾ ಪ್ರಯಾಣಿಕರು ಎಷ್ಟು ಓಡಾಡಿದಾರೆ.ಅದರ ವೆಚ್ಚ ಮಾಹಿತಿ ನೀಡಿಲಿದ್ದೇವೆ.ಆ ಮೊತ್ತ ಸರ್ಕಾರ ನಮಗೆ ಬರಿಸಲಿದೆ.ನಾಲ್ಕು ಸ್ವಾಮ್ಯದ ಸಂಸ್ಥೆ ಗಳು ವೇತನ ಕೊಡಲಿದೆ.ಊಹೆ ಮಾಡಿಕೊಂಡು ಹೇಳಿದ್ದಕ್ಕೆ ಉತ್ತರ ಕೊಡಲು ಆಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
 
ಸರ್ಜಾರದಲ್ಲಿ ವರ್ಗಾವಣೆ ಧಂದೆ ನಡೆಯುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರವಾಗಿ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದು,ನಾವು ಹಿಂದಿನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ವಿ .ಈಗ ನಾವು ಭ್ರಷ್ಟಾಚಾರ ಮಾಡುವುದಕ್ಕೆ ಆಗುತ್ತಾ..?ವಿರೋಧ ಪಕ್ಷದವರು ಆರೋಪ ಮಾಡ್ತಾರೆ .ನಮ್ಮ ಸರ್ಕಾರ ದಕ್ಷ ಅಧಿಕಾರಿಗಳಿಗೆ ಹುಡುಕಿ ಹುಡುಕಿ ಪೋಸ್ಟಿಂಗ್ ಹಾಕ್ತಿದೇವೆ.ಯಾವುದೇ ಭ್ರಷ್ಟಾಚಾರ ನಮ್ಮ ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ