ಸರಕಾರಿ ಹಗರಣಗಳನ್ನು ಬಯಲು ಮಾಡುತ್ತಾ ಹೋಗುವುದೇ ನಮ್ಮ ಕೆಲಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೀರಾವರಿ ಯೋಜನೆಯನ್ನು 400 ಕೋಟಿ ರೂಪಾಯಿಗಳಿಂದ 1000 ಕೋಟಿ ರೂಪಾಯಿಗಳಿಗೆ ಏರಿಸಿದ್ದು ಸುಳ್ಳೇ? ಜಲಾಶಯ ಬರಿದು ಮಾಡಿ ಜಿಂದಾಲ್ ಕಂಪೆನಿಗೆ 7 ಟಿಎಂಸಿ ನೀರು ಹರಿಸಿದ್ದು ಸರಿಯೇ? ಇದೊಂದು ಅಕ್ಷಮ್ಯ ಅಪರಾಧವಾಗಿದೆ ಎಂದು ಗುಡುಗಿದ್ದಾರೆ.
ಅವ್ಯವಹಾರದಲ್ಲಿ ಸಚಿವರ ಪಾಲೆಷ್ಟು ಸಿಎಂ ಪಾಲೆಷ್ಟು ಎನ್ನುವುದನ್ನು ಬಹಿರಂಗಪಡಿಸುತ್ತೆನೆ. ಹಗರಣಗಳನ್ನು ಬಯಲು ಮಾಡುತ್ತಾ ಹೋಗೋದೇ ನಮ್ಮ ಕೆಲಸವಾಗಿದೆ ಎಂದು ಗುಡುಗಿದ್ದಾರೆ.
ಜಲಾಶಯಕ್ಕೆ ತೆರಳಿ ಸತ್ಯಸತ್ಯತೆಯನ್ನು ಪರಿಶೀಲಿಸುತ್ತೇನೆ. ಒಂದು ವೇಳೆ, ರೈತರಿಗೆ ಅನ್ಯಾಯವಾಗಿದ್ದಲ್ಲಿ ಯಾವುದೇ ರೀತಿಯ ಹೋರಾಟಕ್ಕೆ ಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.