ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೊ, ಬಿಎಂಟಿಸಿ ಗಿಫ್ಟ್

ಶುಕ್ರವಾರ, 20 ಅಕ್ಟೋಬರ್ 2023 (14:47 IST)
ಬೆಂಗಳೂರು-ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ ಅನುಕೂಲ ಮಾಡಿಕೊಟ್ಟಿದೆ.ಇಂದು ಮತ್ತು ನಾಳೆ ನಡೆಯುವ ಪಂದ್ಯಗಳಿಗೆ ಎಲ್ಲಾ ದಿನಗಳಲ್ಲೂ ಚಿನ್ನಸ್ವಾಮಿ ಸ್ಟೇಡಿಯಂ ಮಾರ್ಗವಾಗಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಬಿಎಂಟಿಸಿ ನಿರ್ಧಾರ ಮಾಡಿದೆ.ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ, ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಯಲಹಂಕದ ಕಡೆ ಹೆಚ್ಚುವರಿ ಬಸ್‌ಗಳು ಸಂಚಾರ ನಡೆಸಲಿದೆ.
 
ಇನ್ನು ನಮ್ಮ ಮೆಟ್ರೊದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಿಶ್ವಕಪ್ ಪಂದ್ಯಗಳಿಗೆ ಪೇಪರ್‌ ಟಿಕೆಟ್‌ ಮಾಡಲಾಗಿದೆ.ಪಂದ್ಯಗಳಿರುವ ದಿನ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆಮಾಡಲಾಗಿದೆ.ಎಂಜಿ ರಸ್ತೆ ಅಥವಾ ಕಬ್ಬನ್‌ಪಾರ್ಕ್ ನಿಲ್ದಾಣಗಳಿಂದ ವಾಪಸ್ ಬರಲು ಅನುಕೂಲವಾಗಲು ರಿಟರ್ನ್ ಟಿಕೆಟ್ ವ್ಯವಸ್ಥೆ  ಮಾಡಲಾಗಿದೆ.ಸಂಜೆ 4 ಗಂಟೆ ಬಳಿಕ ಯಾವುದಾದರೂ ನಿಲ್ದಾಣಕ್ಕೆ ಒಮ್ಮೆ ಪ್ರಯಾಣ ಮಾಡಬಹುದು.ಬೆಳಗ್ಗೆ ಗಂಟೆಯಿಂದಲೇ ಎಲ್ಲಾ ನಿಲ್ದಾಣಗಳಲ್ಲಿ 50 ರೂಪಾಯಿ ಕೊಟ್ಟು ಈ ಪೇಪರ್ ರಿಟರ್ನ್ ಟಿಕೆಟ್ ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ