H.B.ಮಂಜಪ್ಪ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, M.P.ರೇಣುಕಾಚಾರ್ಯ ವಿವಾದಾತ್ಮಕ ವ್ಯಕ್ತಿ.. ಸೋತ ಬಳಿಕ ರೇಣುಕಾಚಾರ್ಯಗೆ ಬುದ್ದಿ ಭ್ರಮಣೆಯಾಗಿದೆ.. ರೇಣುಕಾಚಾರ್ಯ ಡಬಲ್ ಗೇಮ್ ರಾಜಕಾರಣಿ.. ಕಾಂಟ್ರವರ್ಸಿ ಮನುಷ್ಯ ನಮಗೆ ಬೇಡವೇ ಬೇಡ ಎಂದು ಹೇಳಿದ್ರು. ಇನ್ನು ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ, ಅಲ್ಲಿಯೇ ಶಿಸ್ತು ಉಲ್ಲಂಘನೆ ಮಾಡಿ ನೋಟಿಸ್ ಪಡೆದಿದ್ದಾರೆ.. ರೇಣುಕಾಚಾರ್ಯ ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ.. ರೇಣಕಾಚಾರ್ಯರನ್ನು ಮಾಜಿ ಸಿಎಂ B.S.ಯಡಿಯೂರಪ್ಪ ಮಾನಸ ಪುತ್ರ ಅಂತಾರೆ, ಇವರು ಮಾನಸ ಪುತ್ರ ಅಲ್ಲ ಮಾನಸಿಕ ಪುತ್ರ.. ಅಧಿಕಾರ ಕೊಟ್ಟ ಪಕ್ಷಕ್ಕೆ ಮಾರ್ಯಾದೆ ಕೊಡ್ತಿಲ್ಲ, ಇನ್ನು ನಮಗೆ ಕೊಡ್ತಾರಾ? ಇವರ ಹುಚ್ಚಾಟಗಳನ್ನ ನಾವು ನೋಡೊಕೆ ಆಗಲ್ಲ.. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇವರಂತೆ ಹುಚ್ಚಾಟ ಮಾಡಿರಲಿಲ್ಲ, ಹೀಗಾಗಿ ಪಕ್ಷಕ್ಕೆ ಕರೆದುಕೊಂಡೆವು ಎಂದರು.