ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ

ಶುಕ್ರವಾರ, 1 ಸೆಪ್ಟಂಬರ್ 2023 (15:01 IST)
ಯಡಿಯೂರಪ್ಪ ಅವರನ್ನ ಜೈಲಿಗೆ ಗಳಿಸಿದ್ದೇ ಬಿಜೆಪಿ,Bsy ವಿರುದ್ಧ ಪಿತೂರಿ ನಡೆಸಿದ್ದೇ ಪಕ್ಷದವರು ಲೋಕಾಯುಕ್ತಕ್ಕೂ ದೂರು ಕೊಟ್ಟರು .ಯಡಿಯೂರಪ್ಪ ನಿರಪರಾಧಿ ಲಿಂಗಾಯತರ ಬಣ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.ನಾನು ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರೆ .ಪಕ್ಷದ ಕಚೇರಿಯಿಂದ ಯಾರೋ ಕರೆ ಮಾಡಿ ಮೀಟಿಂಗ್ ಗೆ ಕರೆಯುತ್ತಾರೆ .ಬೇಷರತ್ತಾಗಿ ನೋಟಿಸ್ ವಾಪಸ್ ಪಡೆಯಲಿ.ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ.ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳುತ್ತೇನೆ .ಯಡಿಯೂರಪ್ಪ ಅವರನ್ನ ಮೂಲೆಗುಂಪು ಮಾಡುವ ಕೆಲಸ ಆಗ್ತಿದೆ .ವಿಧಾನ ಸಭೆ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ಕೊಟ್ಟರು .ತಮ್ಮದೇ ಬಣ ಸೃಷ್ಟಿಸಿಕೊಂಡು ಸಿಎಂ ಆಗುವ ಯತ್ನ ಮಾಡುತ್ತಿದ್ದಾರೆ . ಹೆಸರು ಹೇಳದೆ ಬಿಎಲ್ ಸಂತೋಷ್ ವಿರುದ್ದ  ರೇಣುಕಾಚಾರ್ಯ ಕಿಡಿಕಾರಿದ್ದಾರೆ.
 
ಕೆಲಸಕ್ಕೆ ಬಾರದವರು ಬಿಜೆಪಿ ಕಚೇರಿ ನಡೆಸುತ್ತಿದ್ದಾರೆ.ಇಂತಹವರಿಂದಲೇ ವಾಜಪೇಯಿ ಅವರು ಪ್ರಧಾನಿ ಆಗುವುದು ತಪ್ಪಿತು.ಲಿಂಗಾಯತರ ವಿರೋಧ ಮಾಡುತ್ತಿದ್ದಾರೆ .ಜಗದೀಶ್ ಶೆಟ್ಟರ್, ಈಶ್ವರಪ್ಪ, ಸವದಿಗೆ ಟಿಕೆಟ್ ತಪ್ಪಿಸಿದ್ದೇ ಇವರು.ಹಿಂದೆ ಪಕ್ಷ ಕಟ್ಟಲು ದಿ.ಅನಂತಕುಮಾರ್ ಮಾತ್ರ ಸಾತ್ ಕೊಟ್ಟಿದ್ದು.ಇವರ ಪ್ರಣಾಳಿಕೆಯಿಂದಲೇ ಪಕ್ಷಕ್ಕೆಸೋಲಾಗಿದೆ‌.ಆತ್ಮಾವಲೋಕನದ ಅಗತ್ಯ ಇಲ್ಲ.ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು.ರೇಣುಕಾಚಾರ್ಯ ಪಕ್ಷ ಬಿಡುತ್ತಾರೆ ಎಂದು ಕೆಲವರಿಂದ ಹೇಳಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಅಸಮಾಧಾನಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ