ಮೊದಲ ದಿನದಂದೇ 40 ಲಕ್ಷಕ್ಕೂ ಅಧಿಕ ಮಕ್ಕಳು ಲಸಿಕೆಯನ್ನು ಪಡೆದಿದ್ದಾರೆ ಎಂದು ಕೋವಿನ್ ಪೋರ್ಟಲ್ನಲ್ಲಿ ವರದಿಯಾಗಿದೆ. ಮೊದಲ ದಿನ 39.88 ಲಕ್ಷ ಮಕ್ಕಳು ಸೋಮವಾರ ಮಧ್ಯಾಹ್ನದವರೆಗೆ ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ತೀವ್ರವಾಗಿ ಹರಡುತ್ತಿರುವ ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿಯಿಂದಾಗಿ 15 ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಯಿತು.