ಪಾಕಿಸ್ತಾನ ಸರ್ವಾಧಿಕಾರಿ ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ ಶಿಕ್ಷೆ
ಪಾಪಿ ಪಾಕಿಸ್ತಾನದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅಲ್ಲಿನ ನ್ಯಾಯಾಲಯವೊಂದು ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಗಂಭೀರ ಆರೋಪ ಕೇಳಿಬರುತ್ತಲೇ ಹಾಗೂ ಕೇಸ್ ದಾಖಲಾಗುತ್ತಲೇ ಪರ್ವೇಜ್ ಮುಶ್ರಫ್ ಲಂಡನ್ ಗೆ ಓಡಿಹೋಗಿದ್ದರು. ಸಧ್ಯ ದುಬೈನಲ್ಲಿ ಮುಶ್ರಫ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸರ್ವಾಧಿಕಾರಿಯಾಗಿ ಪರ್ವೇಜ್ ಮುಶ್ರಫ್ 1999 ರಿಂದ 2018 ರವರೆಗೆ ಪಾಕಿಸ್ತಾನದಲ್ಲಿ ಆಡಳಿತ ನಡೆಸಿದ್ದರು. ಇದೀಗ ಅದೇ ದೇಶದ ಕೋರ್ಟ್ ನಿಂದ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.