ಸ್ವಂತ ತಂಗಿಯ ಗಂಡನ ಕಥೆ ಮುಗಿಸಿದ ಪಾಪಿ!
ಪ್ರೀತಿಸಿ ಮದುವೆಯಾಗಿದ್ದಕ್ಕೆ ತನ್ನ ತಂಗಿಯ ಗಂಡನನ್ನೇ ಅಣ್ಣನೊಬ್ಬ ಕೊಲೆ ಮಾಡಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಲೇಶ್ (25) ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಹಾಲೇಶ್ ಒಂದು ವರ್ಷದ ಹಿಂದೆ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ತನ್ನ ತಂಗಿಯನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ಯುವತಿಯ ಅಣ್ಣ ತಿಮ್ಮೇಶ್, ಇಂದು ಗಲಾಟೆ ಮಾಡಿಕೊಂಡು ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಹಾಲೇಶ್ ನನ್ನು ಕೊಲೆ ಮಾಡಿದ್ದಾನೆ. ಸ್ಥಳದಲ್ಲಿಯೇ ಹಾಲೇಶ್ ಸಾವನ್ನಪ್ಪಿದ್ದಾನೆ.
ಆರೋಪಿಯನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.