ದಿಢೀರ್ ಟೆಂಪಲ್ ರನ್ ಮಾಡಿದ ಪರಮೇಶ್ವರ್
ಕಾಡಸಿದ್ದೇಶ್ವರ ಮಠಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನೊಣವಿನಕೆರೆಯಲ್ಲಿರುವ ಕಾಡಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು ಪರಂ.
ಶ್ರೀಗಳ ಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡರು. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನಡೆಸಿದ
ವಿಶೇಷ ಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡರು ಪರಮೇಶ್ವರ್.
ಪ್ರಸಕ್ತ ರಾಜಕೀಯದಲ್ಲಿ ಗುರುಬಲ ತುಂಬುವಂತೆ ಪ್ರಾರ್ಥನೆ ಸಲ್ಲಿಕೆ ಮಾಡಿದ್ರು. ಇನ್ನು ಸುಮಾರು 30 ನಿಮಿಷಗಳಿಗೂ ಹೆಚ್ಚು ಸಮಯ ಪರಮೇಶ್ವರ್ ಪೂಜೆ ಸಲ್ಲಿಸಿದ್ರು.