ಈ ಆ್ಯಪ್ ಬಳಸಿ ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ಎಲ್ಲಾ ಮಾಹಿತಿ ತಿಳಿಯಬಹುದಂತೆ
ಭಾನುವಾರ, 31 ಮಾರ್ಚ್ 2019 (11:02 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವಾಹನ ಪಾರ್ಕಿಂಗ್ ಮಾಡಲು ವಾಹನ ಸವಾರರ ಪರದಾಡುವುದನ್ನು ತಪ್ಪಿಸಲು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹೊಸದಾದ ಮೊಬೈಲ್ ಆಪ್ ವೊಂದನ್ನು ಪರಿಚಯಿಸಲಿದೆ.
ಹೌದು. ಬೆಂಗಳೂರು ನಗರದಲ್ಲಿನ ವಾಹನ ದಟ್ಟನೆಯನ್ನು ಗಮನಹರಿಸಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಮಲ್ಯ ರಸ್ತೆ, ಸೇರಿದಂತೆ ನಗರದ 85 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಪಾರ್ಕಿಂಗ್ ಪರದಾಟವನ್ನು ಹೋಗಲಾಡಿಸಲು ಬಿಬಿಎಂಪಿ ‘ಸ್ಮಾರ್ಟ್ ಪಾರ್ಕಿಂಗ್‘ ಯೋಜನೆಯನ್ನು ತಂದಿತ್ತು. ಲೋಕಸಭೆ ಚುನಾವಣೆ ಮುಗಿದ ನಂತರ ‘ಸ್ಮಾರ್ಟ್ ಪಾರ್ಕಿಂಗ್‘ ಕಾಮಗಾರಿ ನಡೆಯಲಿದ್ದು, ಇದರ ಬೆನ್ನಲ್ಲೇ ಪಾರ್ಕಿಂಗ್ ನಿರ್ವಹಣೆಗಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಸಿದ್ಧಪಡಿಸುತ್ತಿರುವ ಸ್ಮಾರ್ಟ್ ಫೋನ್ ಆ್ಯಪ್ ನಲ್ಲಿ ಪಾರ್ಕಿಂಗ್ಗೆ ಸೂಕ್ತವಾದ ಜಾಗವನ್ನು ಹುಡುಕಬಹುದಾಗಿದೆ. ಯಾವ ರಸ್ತೆಯಲ್ಲಿ ಎಷ್ಟು ವಾಹನ ನಿಲುಗಡೆಯಾಗಿದೆ ಎಂಬ ಮಾಹಿತಿಯನ್ನು ಈ ಆ್ಯಪ್ ಒದಗಿಸುತ್ತದೆ. ಎಷ್ಟು ಅವಧಿಯವರೆಗೆ ವಾಹನ ನಿಲುಗಡೆ ಮಾಡಬಹುದು ? ಪಾರ್ಕಿಂಗ್ ಗೆ ತಗಲುವ ಶುಲ್ಕವೆಷ್ಟು? ಎಂಬ ಮಾಹಿತಿ ತಿಳಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.