ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಗೆ ಅವರ ಪ್ರೀತಿಯೇ ಮುಳ್ಳಾಗಿದೆ.
ಪ್ರೀತಿಸುತ್ತಿದ್ದ ಯುವಕ – ಯುವತಿ ಮದುವೆಗೆ ಮನೆಯಲ್ಲಿ ಒಪ್ಪಿಗೆ ಸಿಗದ ಕಾರಣ ಮನನೊಂದು ಯುವ ಜೋಡಿಗಳು ವಿಷ ಕುಡಿದಿದ್ದಾರೆ.
ಘಟನೆಯಲ್ಲಿ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದರೆ, ಯುವಕನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಹುಬ್ಬಳ್ಳಿಯಲ್ಲಿ ಘಟನೆ ನಡೆದಿದ್ದು, ಪ್ರಿಯಕರ ಹುಲಗೆಪ್ಪ ಸುಳ್ಳದ ತಾನು ವಿಷ ಕುಡಿದು ಪ್ರೇಯಸಿಗೂ ವಿಷ ಕುಡಿಸಿದ್ದನು.
ಯುವಕ ಹುಲಗೆಪ್ಪ ಸುಳ್ಳದ ವಿರುದ್ಧ ಹುಡುಗಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.