ಸಂಬಳ ಬರದಿದ್ದಕ್ಕೆ ಫಿನಾಯಿಲ್ ಕುಡಿದು ಮಹಿಳೆ ಆತ್ಮಹತ್ಯೆಗೆ ಯತ್ನ
ಡಿಸಿ ಕಚೇರಿ ಬಳಿ ಫಿನಾಯಿಲ್ ಕುಡಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
5 ತಿಂಗಳ ಸಂಬಳದಲ್ಲಿ 10 ಸಾವಿರ ಹಣ ಮಾತ್ರ ನೀಡಿದ್ದರು. 25 ಸಾವಿರ ಬಾಕಿ ಹಣ ವೇತನ ನೀಡಬೇಕಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಮಹಿಳೆ.
ಲಕ್ಷ್ಮೀ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರು. ಸಂಬಳ ಕೇಳಿದ್ದರಿಂದಾಗಿ ಚೀಟಿ ಬರೆಸಿಕೊಂಡು ಕೆಲಸದಿಂದ ತೆಗೆಯುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಅಲ್ಲದೇ ಎರಡು ವಾರಗಳಿಂದ ಕೆಲಸದಿಂದ ವಲಯ ಅರಣ್ಯಾಧಿಕಾರಿ ಬಿಡಿಸಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.