ಚಿನ್ನಯ್ಯ ತಂದ ಬುರುಡೆ ಮೂಲ ತನಿಖೆ: ಸೌಜನ್ಯ ಮಾವ ವಿಠಲ್‌ ಗೌಡಗೆ ಡವಡವ

Sampriya

ಶನಿವಾರ, 6 ಸೆಪ್ಟಂಬರ್ 2025 (20:05 IST)
ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಚಿನ್ನಯ್ಯ ತಂದ ಬುರುಡೆಯ ಮೂಲ ಕೆದಕಲು ಹೋದ ಎಸ್‌ಐಟಿ ಅಧಿಕಾರಿಗಳಿಗೆ ಮತ್ತೊಂದು ಸ್ಫೋಟಕ ಮಾಹಿತಿ ದೊರಕಿದೆ.

ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ಗಿರೀಶ್ ಮಟ್ಟಣ್ಣವರ್‌ಗೆ ನೀಡಿದ್ದು ಪಾಂಗಳದ ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ. 

ವಿಠಲ ಗೌಡನನ್ನು ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಇಂದು ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.  

ಯಾವುದೇ ಕ್ಷಣದಲ್ಲಿ ವಿಠಲ ಗೌಡನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಯಿದೆ. ಈ ಮಧ್ಯೆ ಎಸ್‌ಐಟಿ ವಶದಲ್ಲಿ ಚಿನ್ನಯ್ಯನಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜೈಲಿಗೆ ರವಾನಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ