ಪೋಷಕರೇ ಎಚ್ಚರ : ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ

ಸೋಮವಾರ, 31 ಜುಲೈ 2023 (12:52 IST)
ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಲ್ಲಿ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದೆ. ಈ ವಿಚಿತ್ರ ಚರ್ಮರೋಗದಿಂದ ನಾಲ್ವರು ಮಕ್ಕಳು ಬಳಲುತ್ತಿದ್ದಾರೆ.
 
ಈ ಚರ್ಮರೋಗ ಆರು ತಿಂಗಳ ಮಗುವಾಗಿದ್ದಾಗಲೇ ಕಾಣಿಸಿಕೊಳ್ಳುತ್ತಿದೆ. ದೇಹದ ಚರ್ಮದ ಮೇಲೆ ಚುಕ್ಕಿಗಳಾಗಾಗುತ್ತವೆ. ಇದರಿಂದ ಕಾಲಕ್ರಮೇಣ ಮಕ್ಕಳಲ್ಲಿ ದೃಷ್ಟಿದೋಷ ಹಾಗೂ ಶ್ರವಣದೋಷ ಸಮಸ್ಯೆ ಉಂಟಾಗುತ್ತಿದೆ.

ಕಳೆದ 20-25 ವರ್ಷಗಳ ಹಿಂದೆಯೂ ಕೆಲವು ಮಕ್ಕಳಲ್ಲಿ ಈ ಚರ್ಮರೋಗ ಕಾಣಿಸಿಕೊಂಡಿತ್ತು. ರಕ್ತ ಸಂಬಂಧದಲ್ಲೇ ವಿವಾಹದ ಕಾರಣ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ