ಸಿಎಂ ಸಿದ್ದರಾಮಯ್ಯ ಜೊತೆಗಿನ ಸಭೆ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು,ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು.ರಾಷ್ಟ್ರೀಯ ಆರೋಗ್ಯ ಅಭಿಯಾನದ ಬಗ್ಗೆ ತಿಳಿದುಕೊಂಡರು.ಆಸ್ಪತ್ರೆ ಉನ್ನತೀಕರಣದ ಬಗ್ಗೆ ಸೂಚನೆ ನೀಡಿದ್ದಾರೆ.ಡಯಾಲಿಸಿಸ್ ಮತ್ತು ಆಂಬುಲೆನ್ಸ್ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದ್ದಾರೆ.ವಿಮೆ ಯೋಜನೆ ಮಾಡೋದಕ್ಕೆ ಸೂಚನೆ ಕೊಟ್ಟಿದ್ದಾರೆ.ಆರೋಗ್ಯ ವಿಮೆ ಬಗ್ಗೆ ಅಧ್ಯಯನ ಮಾಡಿ ಎಂದು ಸೂಚನೆ ನೀಡಿದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಚಾಮರಾಜನಗರ ದುರಂತದ ಬಗ್ಗೆ ಚರ್ಚೆ ಮಾಡಿಲ್ಲ.ಕೇವಲ ಇಲಾಖೆಯ ಪ್ರಗತಿಗೆ ಮಾತ್ರ ಸಭೆ ಸೀಮಿತವಾಗಿತ್ತು.ಇನ್ನೂ ಚಾಮರಾಜನಗರ ದುರಂತ ಕೇಸ್ ಇದನ್ನ ಮರು ತನಿಖೆ ಮಾಡಿ ಅಂತ ಸರ್ಕಾರಕ್ಕೆ ತಿಳಿಸಿದ್ದೇನೆ.ಕೋವಿಡ್ ಸಂದರ್ಭದಲ್ಲಿ ನಡೆದ ವೈದ್ಯಕೀಯ ಖರೀದಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ.ಅದನ್ನ ಯಾವ ರೀತಿ ವಿಚಾರಣೆ ಮಾಡಬೇಕು ಅಂತ ಚರ್ಚೆ ಮಾಡುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪ್ರತಾಪ್ ಸಿಂಹ ಒಳ ಒಪ್ಪಂದ ಹೇಳಿಕೆ ವಿಚಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.ಪ್ರತಾಪ್ ಸಿಂಹರಿಗೆ ಒಳ ಒಪ್ಪಂದದ ಬಗ್ಗೆ ಮಾಹಿತಿ ಇದ್ರೆ ಸ್ಪಷ್ಟ ಪಡಿಸಲಿ.ಸುಮ್ಮನೆ ಮಾತನಾಡೋದು ಬೇಡ.ಹಿಂದೆ ತಪ್ಪಾಗಿದ್ರೆ ಸರಿಪಡಿಸುವ ಕೆಲಸ ಮಾಡ್ತೀವಿ.ಲೋಪದೋಷಗಳಿದ್ದರೆ ಸರಿ ಮಾಡಿ ತನಿಖೆ ಮಾಡಿಸುತ್ತೇವೆ.ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುವ ಘಟನೆ ನಡೆದಿದ್ದರೆ .ಸಂಬಂಧಪಟ್ಟ ಇಲಾಖೆ ಗಮನ ಹರಿಸುತ್ತದೆ.ದ್ವೇಷದ ರಾಜಕಾರಣ ಮಾಡಲ್ಲ.ಯಾವ ರೀತಿ ತನಿಖೆ ಆಗಬೇಕು ಅಂತ ನಾವು ಚಿಂತನೆ ಮಾಡ್ತೀವಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.