ಹಳೆಯ ಸಂಸತ್ ಭವನವನ್ನು ಇನ್ನುಮುಂದೆ ಸಂವಿಧಾನ ಭವನ ಎಂದು ಹೆಸರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ನೂತನ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾಗೆ ಪ್ರವೇಶಿಸುವ ಮುನ್ನ ಹಳೆಯ ಕಟ್ಟಡದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಷ್ಟು ದಿನ ಈ ಕಟ್ಟಡದಲ್ಲಿ ನಡೆದ ಸಂಸದೀಯ ನಡವಳಿಕೆಗಳ ಗೌರವ, ಘನತೆಗೆ ಕೊಂಚವೂ ಚ್ಯುತಿಯಾಗದಂತೆ ಅವುಗಳನ್ನು ಹೊಸ ಕಟ್ಟಡಕ್ಕೂ ಕೊಂಡೊಯ್ಯೋಣ ಎಂದು ಹೇಳಿದರು.
ಮುಂದಿನ ಜನಾಂಗಕ್ಕೆ ಕೊಡುಗೆಯಾಗಲಿರುವ ಈ ಅವಕಾಶವನ್ನು ನಾವೆಂದು ಕಳೆದುಕೊಳ್ಳಬಾರದು ಎಂದು ನುಡಿದ ಪ್ರಧಾನಿ ಮೋದಿ, ಮುಂಬರುವ ದಿನಗಳಲ್ಲಿಯೂ ನೀವು ಇದೇ ರೀತಿಯ ವಿಶ್ವಾಸವನ್ನು ನೀಡಲಿದ್ದೇರೆಂಬ ಭರವಸೆ ನನಗಿದೆ. ಇದನ್ನು ನಾವು ಕೇವಲ ಹಳೆಯ ಪಾರ್ಲಿಮೆಂಟ್ ಎಂದು ಕರೆಯುವುದು ಬೇಡ. ನಿಮ್ಮಲ್ಲರ ಅನುಮತಿಯೊಂದಿಗೆ ಈ ಕಟ್ಟಡವು ಮುಂದೆ ಸಂವಿಧಾನ ಭವನವೆಂದು ಹೆಸರಾಗಲಿದೆ ಎಂದು ನುಡಿದರು.