3 ಬಾರಿ ಸಿಎಂ ಆಗೋದು ತಪ್ಪಿಸಿ ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ- ಪರಮೇಶ್ವರ್ ಅಸಮಾಧಾನ

ಸೋಮವಾರ, 25 ಫೆಬ್ರವರಿ 2019 (06:13 IST)
ದಾವಣಗೆರೆ : ಹಲವು ದಲಿತ ನಾಯಕರು ಸಿಎಂ ಆಗುದನ್ನ ತಪ್ಪಿಸಿದ್ದಾರೆ. ನನಗೂ 3 ಬಾರಿ ಸಿಎಂ ಆಗೋದು ತಪ್ಪಿದೆ, ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ ಎಂದು ಡಾ. ಜಿ. ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.


ಜಿಲ್ಲೆಯಲ್ಲಿ ಶಿವಯೋಗಿ ಮಂದಿರದ ಆವರಣದಲ್ಲಿ ನಡೆದ ಛಲವಾದಿ ಮಹಾಸಭಾದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ದಲಿತರು ಅನಾದಿ ಕಾಲದಿಂದಲೂ ತುಳಿತಕ್ಕೆ ಓಳಗಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ. ದಲಿತರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಯಾರಿಗೂ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಈ ಹಿಂದೆ ಬಸವಲಿಂಗಪ್ಪ ಅವರು, ಕೆಚ್ ರಂಗನಾಥ್ ಅವರಿಗೂ ಸಿಎಂ ಆಗುವ ಸ್ಥಾನ ತಪ್ಪಿಸಿದ್ದರು. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಒಂದು ಹೆಜ್ಜೆ ಇಟ್ಟಿದ್ದಾರೆ ಸಿಎಂ ಆಗುತ್ತಿದ್ದರು. ನನಗೂ 3 ಬಾರಿ ಸಿಎಂ ಆಗುವ ಅವಕಾಶ ತಪ್ಪಿತ್ತು. ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ