ಭಾರತ-ಪಾಕ್ ವಿಶ್ವಕಪ್ ಕ್ರಿಕೆಟ್: ಸಚಿನ್ ಗೆ ಮಾತಿನ ಪೆಟ್ಟುಕೊಟ್ಟ ಸೌರವ್ ಗಂಗೂಲಿ!
ಸಚಿನ್ ಹೇಳಿಕೆಗೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ ಗಂಗೂಲಿ ‘ಸಚಿನ್ ಗೆ ಎರಡು ಪಾಯಿಂಟ್ ಮಾತ್ರ ಬೇಕು. ಆದರೆ ನನಗೆ ವಿಶ್ವಕಪ್ಪೇ ಬೇಕು’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಉಭಯ ದೇಶಗಳು ಮುಖಾಮುಖಿಯಾಗಬೇಕೇ ಬೇಡವೇ ಎಂಬುದನ್ನು ಭಾರತ ಸರ್ಕಾರ ನಿರ್ಧರಿಸುತ್ತದೆ ಎಂದಿದ್ದಾರೆ. ಇದಕ್ಕೂ ಮೊದಲು ಗಂಗೂಲಿ ಪಾಕ್ ನೊಂದಿಗೆ ಕ್ರಿಕೆಟ್ ಮಾತ್ರವಲ್ಲ, ಯಾವುದೇ ಕ್ರೀಡಾ ಸಂಬಂಧ ಇಟ್ಟುಕೊಳ್ಳಬಾರದು ಎಂದಿದ್ದರು.