ಮಂಡ್ಯ : ಕೊರೊನಾ ಭೀತಿಯಿಂದ ಎಲ್ಲಾ ಸಭೆ ಸಮಾರಂಭಗಳನ್ನು ರದ್ದು ಮಾಡಲಾಗಿದೆ. ಆದರೆ ಕೆಆರ್ ಎಸ್ ಡ್ಯಾಂ ಬಳಿ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ ಮಾಡಲಾಗಿದೆ.
ಮೈಸೂರು ಮೂಲದ ಸಂಜಯ್ ಎಂಬುವವರಿಗೆ ಸೇರಿದ ತೋಟದಲ್ಲಿ ಈ ರೀತಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಅಲ್ಲೇ ಹತ್ತಿರದಲ್ಲೇ ಪೊಲೀಸ್ ಠಾಣೆ ಇದ್ದರೂ ಕೂಡ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇದನ್ನು ಕೇಳಲು ಬಂದ ಸ್ಥಳೀಯರಿಗೂ ಕೂಡ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾರ್ಟಿಯಲ್ಲಿ ಭಾಗವಹಿಸಿದವರ ಮೇಲೆ ಕೇಸ್ ದಾಖಲಿಸುವಂತೆ ಆದೇಶ ಹೊರಡಿಸಲಾಗಿದೆ.