ನವದೆಹಲಿ : ಕೊರೊನಾ ಭೀತಿಯಿಂದ ದೆಹಲಿಯಲ್ಲಿ ಈ ವರ್ಷ ‘ಝೀರೋ ಅಕಾಡೆಮಿಕ್ ಇಯರ್’ ಘೋಷಿಸುವಂತೆ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ದೆಹಲಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಜುಲೈ ಕೊನೆಯಲ್ಲಿ ದೆಹಲಿಯಲ್ಲಿ 5.5ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಡಿಸಿಎಂ ಮನಿಷ್ ಸಿಸೊಡಿಯಾ ಹೇಳಿದ್ದಾರೆ. ಅಲ್ಲದೇ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಇದರಿಂದ ಕಂಗೆಟ್ಟ ಪೋಷಕರು, ಶಾಲೆಗಿಂತ ಮಕ್ಕಳ ಆರೋಗ್ಯ ಮುಖ್ಯ. ಆದಕಾರಣ ಈ ವರ್ಷ ಶಾಲೆಗಳನ್ನು ತೆರೆಯದೆ ‘ಝೀರೋ ಅಕಾಡೆಮಿಕ್ ಇಯರ್’ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.