ಕುಮಟದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರು ಎರಡು ಗಂಟೆಯಿಂದ ಬಸ್ಗಾಗಿ ಕಾಯುತ್ತಿದ್ದಾರೆ.
ಕುಮಟದಿಂದ ಶಿರಸಿಗೆ ತೆರಳಲು ಬಸ್ ಸಮಸ್ಯೆಯಾಗಿದೆ. ಬಸ್ ಹತ್ತಲು ನೂಕುನುಗ್ಗಲು ಉಂಟಾಗುತ್ತದೆ. ಶಿರಸಿ-ಹುಬ್ಬಳ್ಳಿ ಕಡೆ ಪ್ರಯಾಣಿಸಲು ಪ್ರಯಾಣಿಕರು ಪರದಾಡುವಂತಾಗಿದೆ. ಬೇರೆ ನಿಲ್ದಾಣದಿಂದ ಕುಮಟ ಬಸ್ ನಿಲ್ದಾಣಕ್ಕೆ ಬರುವಾಗಲೇ ಬಸ್ ಭರ್ತಿಯಾಗಿ ಬರುತ್ತದೆ. ಹೀಗಾಗಿ ಕುಮಟ ಬಸ್ ನಿಲ್ದಾಣದಲ್ಲಿರುವವರಿಗೆ ಬಸ್ ಸಮಸ್ಯೆಯಾಗಿದೆ.. ಹೀಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.