ಪಠಾನ್ ಚಿತ್ರವನ್ನು ವಿರೋಧಿಸುವುದಿಲ್ಲ- VHP
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾದಲ್ಲಿ ಸೂಚಿಸಿರುವ ಬದಲಾವಣೆಗಳು ಸರಿಯಾಗಿರುವುದರಿಂದ ಸದ್ಯಕ್ಕೆ ಅದನ್ನು ವಿರೋಧಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿದೆ. ಸದ್ಯಕ್ಕೆ ಪಠಾಣ್ ಚಿತ್ರವನ್ನು ವಿಎಚ್‌ಪಿ ವಿರೋಧಿಸುವುದಿಲ್ಲ. ನಮ್ಮ ಹಿಂದಿನ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರದಲ್ಲಿ ಮಾಡಿರುವ ಬದಲಾವಣೆಗಳು ಸರಿಯಾಗಿವೆ. ಸಿನಿಮಾ ನೋಡಿದ ನಂತರ ಆಕ್ಷೇಪಾರ್ಹವಾದದ್ದೇನಾದರೂ ಕಂಡು ಬಂದರೆ ಚಿತ್ರವನ್ನು ವಿರೋಧಿಸುವುದನ್ನು ಮರುಪರಿಶೀಲಿಸುತ್ತೇವೆ ಎಂದು ವಿಎಚ್‌ಪಿ ವಕ್ತಾರ ಶ್ರೀರಾಜ್ ನಾಯರ್ ಹೇಳಿದ್ದಾರೆ. ಇಂದು 5,000 ಪರದೆಗಳಲ್ಲಿ ಪಠಾಣ್ ಬಿಡುಗಡೆಯಾಗಿದ್ದು, ಅದ್ದೂರಿ ಪ್ರದರ್ಶನ ಕಂಡಿದೆ.