ಪವಿತ್ರಾ ಗೌಡ ಜೈಲಿನಲ್ಲಿರುವ ಸಿಟ್ಟನ್ನು ಮಾಧ್ಯಮಗಳ ಮೇಲೆ ತೀರಿಸಿಕೊಂಡ ಸಹೋದರ
ನಿನ್ನೆ ಪೊಲೀಸ್ ಕಸ್ಟಡಿ ಮುಗಿದ ಬಳಿಕ ಪವಿತ್ರಾ ಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಇನ್ನೂ ಪವಿತ್ರಾ ಅವರನ್ನು ಭೇಟಿಯಾಗಲು ಅವರ ತಾಯಿ ಮತ್ತು ಮಗಳು ಹೈಕೋರ್ಟ್ ಬಳಿ ಬಂದು ಕಾದು ಕುಳಿತಿದ್ದರು. ಇನ್ನೂ ಪವಿತ್ರಾ ಅವರು ಪೊಲೀಸ್ ವ್ಯಾನ್ ಹತ್ತುವಾಗ ಅವರನ್ನು ಮಾತನಾಡಿಸಲು ತಾಯಿ ಮತ್ತು ಮಗಳು ಮುಂದಾಗಿದ್ದಾರೆ. ಈ ವೇಳೆ ತಾಯಿ ಜೈಲಿಗೆ ಹೋಗುತ್ತಿರುವುದನ್ನು ನೋಡಿ ಮಗಳು ಬಿಕ್ಕಿ ಬಿಕ್ಕಿ ಅತ್ತಾ ಘಟನೆ ನಡೆದಿದೆ.