ಅನ್ನಭಾಗ್ಯದಿಂದಲೇ ಕೋವಿಡ್ ಸಂದರ್ಭದಲ್ಲಿ ಜನ ಪ್ರಾಣ ಉಳಿಸಿಕೊಂಡಿದ್ದಾರೆ : ಜಮೀರ್

ಮಂಗಳವಾರ, 7 ಫೆಬ್ರವರಿ 2023 (10:21 IST)
ಕಲಬುರಗಿ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ನೀಡಿದ ಅನ್ನ ಭಾಗ್ಯ ಯೋಜನೆಯಿಂದಲೇ ಕೋವಿಡ್ ಸಂದರ್ಭದಲ್ಲಿ ಜನ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಶಾಸಕ ಹಮೀರ್ ಅಹ್ಮದ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ಕಲಬುರಗಿ ಜಿಲ್ಲೆ ಕಮಲಾಪುರ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್, 2013 ರಿಂದ 2018ರ ವರೆಗೆ ಸಿದ್ದರಾಮಯ್ಯ ನೀಡಿದ ಭಾಗ್ಯಗಳನ್ನು ಜನ ನೆನೆಯುತ್ತಿದ್ದಾರೆ.
 
ಆದ್ರೆ ಸಿದ್ದರಾಮಯ್ಯ ನೀಡಿದ ಅನ್ನಭಾಗ್ಯ ಅಕ್ಕಿಯನ್ನ ಬಿಜೆಪಿ ಕಡಿತಗೊಳಿಸಿದೆ. ಆದ್ದರಿಂದ ಕಾಂಗ್ರೆಸ್ಗೆ ಈ ಬಾರಿ ಆಶೀರ್ವಾದ ಮಾಡಲು ಜನ ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ