ಹದಿನೈದು ದಿನಗಳಿಂದ ಸೂರ್ಯನನ್ನೇ ಕಾಣದ ಜನರು…!

ಸೋಮವಾರ, 16 ಜುಲೈ 2018 (11:34 IST)
ಪರ್ವತಗಳ ಶ್ರೇಣಿ ಕಾಫಿ ನಾಡು ಮಲೆನಾಡು ಪ್ರದೇಶದಲ್ಲಿ ಭಾರಿ ಗಾಳಿ ಸಹಿತ ಮಳೆ ಮುಂದುವರಿದಿದೆ. ಸುಮಾರು ಸುಮಾರು ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೂರ್ಯನನ್ನೇ ಜನರು ಕಂಡಿಲ್ಲ.


ಚಿಕ್ಕಮಗಳೂರಿನಲ್ಲಿ ಮುಂದುವರೆದ ಭಾರಿ ಗಾಳಿ ಮಳೆಯಿಂದಾಗಿ ಜನಜೀವನ ಹದಗೆಡುತ್ತಿದೆ. ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮುಂದುವರೆದ ವರುಣನಿಂದಾಗಿ ಸಮಸ್ಯೆಗಳ ಸುಳಿಯಲ್ಲಿ ಜನರು ಸಿಲುಕುವಂತಾಗಿದೆ. ಕಾಫಿ ನಾಡಿನ ಜನತೆಗೆ ಸೂರ್ಯನ ದರ್ಶನವೇ ಇಲ್ಲದಂತಾಗುತ್ತಿದೆ. ಎನ್.ಆರ್ ಪುರ, ಕೊಪ್ಪ, ಶೃಂಗೇರಿ ಭಾಗದಲ್ಲಿ ಎಡಬಿಡದ್ದೆ ಸುರಿಯುತ್ತಿರುವ ಮಳೆಯಿಂದಾಗಿಕಳೆದ ಹದಿನೈದು ದಿನಗಳಿಂದ ಸೂರ್ಯನನ್ನು ಜನರು ಕಂಡಿಲ್ಲ.

ಕೊಪ್ಪ ತಾಲೂಕಿನ ಬಿಳಾಲು ಕೊಪ್ಪ ಹಾಗೂ ಮೂಡಿಗೆರೆಯ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತಗೊಳ್ಳುತ್ತಿದೆ. ಗುಡ್ಡ ಕುಸಿತದಿಂದಾಗಿ ಬಿಳಾಲು ಕೊಪ್ಪ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಅಲ್ಲಲ್ಲಿ ಕೂಡ ರಸ್ತೆ ಸಂಚಾರಕ್ಕೆ ತಡೆಯಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ