ನಾಳೆ ಕಾವೇರಿ ನೀರಿನ ತೀರ್ಪು, ಸುಪ್ರೀಂನತ್ತ ಎಲ್ಲರ ಚಿತ್ತ: ಜನಜೀವನ ಅಸ್ತವ್ಯಸ್ಥ ಸಾಧ್ಯತೆ

wd

ಗುರುವಾರ, 15 ಫೆಬ್ರವರಿ 2018 (16:58 IST)
ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಾಳೆ ತೀರ್ಪು ನೀಡಲಿದ್ದು, ರಾಜ್ಯಕ್ಕೆ ನ್ಯಾಯ ಸಿಗುವುದೋ ಅಥವಾ ಅನ್ಯಾಯವಾಗುವುದೋ ಎಂಬ ಕಾರಣಕ್ಕೆ ಎಲ್ಲರ ಚಿತ್ತಕ್ಕೆ ಸುಪ್ರೀಂಕೋರ್ಟಿನತ್ತ ಹರಿದಿದೆ.
ದೀರ್ಘ ಕಾಲದಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣದ ತೀರ್ಪು ನಾಳೆ ಹೊರಬೀಳಲಿದ್ದು, ನಾಳಿನ ಫಲಿತಾಂಶ ಕುತೂಹಲ ಕೆರಳಿಸಿದೆ.
 
2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯಕ್ಕೆ ವಾರ್ಷಿಕ 270 ಅಡಿ ಟಿಎಂಸಿ, ತಮಿಳುನಾಡುಗೆ 419 ಹಾಗೂ ಕೇರಳಕ್ಕೆ 30 ಟಿಎಂಸಿ ನೀರು ಹಂಚಿಕೆ ಆದೇಶವನ್ನು ಘೋಷಿಸಿತ್ತು. ಈ ಆದೇಶದ ವಿರುದ್ಧ ಮೂರು ರಾಜ್ಯಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.
 
ಸುಪ್ರೀಂಕೋರ್ಟ್ ತೀರ್ಪು ನಾಳೆ ಪ್ರಕಟವಾಗುವುದಿಲ್ಲ 
 
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಂಬಂಧ ಸುಪ್ರೀಂಕೋರ್ಟ್‌ ಫೆಬ್ರುವರಿ 23ರಂದು ತೀರ್ಪು ನೀಡುವ ಸಾಧ್ಯತೆಯಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ನನಗಿರುವ ಮಾಹಿತಿ ಪ್ರಕಾರ ಸುಪ್ರೀಂಕೋರ್ಟ್‌ ನಾಳೆ ಕಾವೇರಿ ತೀರ್ಪು ನೀಡುವ ಸಾಧ್ಯತೆಯಿಲ್ಲ ಎಂದಿದ್ದಾರೆ.
 
 ನ್ಯಾಯ ದೊರೆಯುವ ವಿಶ್ವಾಸ
 
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಂಬಂಧ ಸುಪ್ರೀಂಕೋರ್ಟ್‌ ನಾಳೆ ತೀರ್ಪು ನೀಡುವ ಬಗ್ಗೆ ಖಚಿತ ಮಾಹಿತಿ ಇಲ್ಲ ಕಾನೂನು ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. 
 
ನ್ಯಾಯಮೂರ್ತಿಯೊಬ್ಬರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ತೀರ್ಪು ಪ್ರಕಟವಾಗಬೇಕಿದೆ. ಆದರೆ, ನಾಳೆ ತೀರ್ಪು ಹೊರಬೀಳುವ ಸಾಧ್ಯತೆಯಿಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ