ಮೊಬೈಲ್ ಕದ್ದು ಓಡುತ್ತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನರು

ಬುಧವಾರ, 8 ಜನವರಿ 2020 (17:23 IST)
ಹಾಡು ಹಗಲಿನಲ್ಲಿಯೇ ಮೊಬೈಲ್ ಫೋನ್ ಕಳ್ಳತನ ಮಾಡಿಕೊಂಡು ಓಡುತ್ತಿದ್ದ ಕಳ್ಳನನ್ನು ಹಿಡಿದು ಜನರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹುಬ್ಬಳ್ಳಿ ನಗರದ ವೀರರಾಣಿ ರಾಣಿ ಕಿತ್ತೂರು ಚೆನ್ನಮ್ಮಾ ವೃತ್ತದಲ್ಲಿ ಘಟನೆ ನಡೆದಿದೆ. ಚೆನ್ನಮ್ಮಾ ವೃತ್ತದಲ್ಲಿ ಚನ್ನಾಪೂರ ಹಳ್ಳಿಯ ಹನಮಂತಪ್ಪಾ ಎಂಬ ವ್ಯಕ್ತಿ ತನ್ನ ಹೊಟ್ಟೆ ನೋವು ಆಗುತ್ತಿದೆ ಎಂದು ಅಲ್ಲಿಯೇ ಕುಳಿತಿದ್ದನು.

ಆಗ ಕಳ್ಳನೊಬ್ಬ ಬಂದು ತನ್ನ ತಾಯಿಗೆ ಫೋನ್ ಮಾಡಬೇಕು ಎಂದು ಆ ಹನಮಂತಪ್ಪನ ಹತ್ತಿರ ಮೊಬೈಲ್ ತೆಗೆದುಕೊಂಡು ಮಾತನಾಡುತ್ತಿದ್ದವನಂತೆ ನಟಿಸಿದ್ದಾನೆ.

ಕೊನೆಗೆ ಕಳ್ಳ ಹಾಗೆಯೇ ಫೋನ್ ತೆಗೆದುಕೊಂಡು ಓಡಲಾರಂಭಿಸಿದ್ದಾನೆ.  ಅವನನ್ನು ಹನುಮಂತ ಬೆನ್ನು ಹತ್ತಿ ಹಿಡಿದನು. ಆಗ ಸಾರ್ವಜನಿಕರು ಮೊಬೈಲ್ ಕಳ್ಳನಿಗೆ ಗೂಸಾ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ