ಎರಡನೇ ಪತ್ನಿಯ ಕತ್ತು ಕತ್ತರಿಸಿ ಪರಾರಿಯಾದ ಮೊದಲ ಪತ್ನಿ
ಗಂಡನ ಎರಡನೇ ಪತ್ನಿಯನ್ನು ಮೊದಲನೇ ಪತ್ನಿಯೇ ಕೊಲೆ ಮಾಡಿ ಪರಾರಿಯಾಗಿದ್ದಾಳೆ.
ಇಬ್ಬರು ಹೆಂಡತಿಯರು ಹಾಗೂ ಮೂವರು ಮಕ್ಕಳೊಂದಿಗೆ ತೋಟದ ಮನೆಯೊಂದರಲ್ಲಿ ದಯಾನಂದ ವಾಸಿಸುತ್ತಿದ್ದನು. ಆದರೆ ಇಬ್ಬರೂ ಪತ್ನಿಯರಲ್ಲಿ ಜಗಳ ಶುರುವಾಗಿದೆ.
ಹೀಗಾಗಿ ಮೊದಲನೇ ಪತ್ನಿ ಆಶಿಕಾ ಗುಪ್ತಾ ತನ್ನ ಗಂಡನ ಎರಡನೇ ಹೆಂಡತಿ ವಶಿಕಾಳನ್ನು ಕತ್ತಿಯಿಂದ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾಳೆ.
ಕೊಡಗಿನ ಅರೆಕಾಡುದಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರೋ ಆಶಿಕಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.