ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.ಬೆಂಗಳೂರಿನ ಭೌಗೋಳಿಕ ವಿಸ್ತೀರ್ಣ 2196 ಚದರ ಕಿಲೋಮೀಟರ್ ಆಗಿದೆ. 2019ರ ವೇಳೆಗೆ ವಾಹನಗಳ ಸಂಖ್ಯೆ 80 ಲಕ್ಷಕ್ಕಿಂತ ಹೆಚ್ಚಾಗಿದೆ. ಬೆಂಗಳೂರು ರಾಜ್ಯ ರಾಜಧಾನಿಯಾಗಿರೋದ್ರಿಂದ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಪ್ರತಿದಿನ ಸಾವಿರಾರು ವಾಹನಗಳು ಬರುತ್ತವೆ. ರಸ್ತೆಗಳಲ್ಲಿ ಅಗಾಧವಾದ ದಟ್ಟಣೆ ಇರುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅತಿಯಾದ ಒತ್ತಡದಲ್ಲಿದೆ ಎಂದು ಹೇಳಲಾಗಿದೆ.