ಕಾವೇರಿ ವಿಚಾರವಾಗಿ ಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಆದೇಶ ಬಂದ ಬಳಿಕ ಪುಸ್ತಕ ಬಿಸಾಕಿ ಹೋಗಲು ನಾರಿಮನ್ ಅವರೇ ಬೇಕಾ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರವಾಗಿ ವಾದ ಮಂಡಿಸಲು ನಮ್ಮಲೇ ಸಾಕಷ್ಟು ಮೇಧಾವಿ ವಕೀಲರಿದ್ದಾರೆ. ಫಾಲಿ ನಾರಿಮನ್ ಒಬ್ಬ ಪಲಾಯನವಾದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನಮ್ಮ ನೆಲದವಳು, ನಾವು ಡ್ಯಾಂ ಕಟ್ಟಿದ್ದೇವೆ. ಆದರೆ, ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಪದೇ ಪದೇ ತೀರ್ಪು ನೀಡುತ್ತಿದೆ. ನಾವು ಎಲ್ಲಿಯವರೆಗೂ ಹೋರಾಟ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.