ಕೇರಳ ನಿಮಿಷ ಪ್ರಿಯ ಗಲ್ಲು ಮುಂದೂಡಿಕೆ: ಕೊನೆಯ ಕ್ಷಣದಲ್ಲಿ ನಡೆದಿದ್ದೇನು
ಕೇರಳ ನಿಮಿಷ ಪ್ರಿಯ ಗಲ್ಲು ಶಿಕ್ಷೆ ಕೇಸ್ ಇಡೀ ದೇಶವೇ ಎದಿರು ನೋಡುತ್ತಿದೆ. ಪಾಲಕ್ಕಾಡ್ ಮೂಲದ 37 ವರ್ಷದ ನಿಮಿಷ ಪ್ರಿಯಗೆ ನಾಳೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ ಇಂದು ಕೊನೆಯ ಕ್ಷಣದಲ್ಲಿ ಸೂಫಿ ಸಂತರ ನೇತೃತ್ವದಲ್ಲಿ ಸಭೆ ನಡೆದು ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿತ್ತು.
ನಿಮಿಷ ಪ್ರಿಯ ಯೆಮನ್ ಪ್ರಜೆ ಮಹ್ದಿ ಎಂಬಾತನನ್ನು ಕೊಲೆ ಮಾಡಿರುವ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು. ಹೀಗಾಗಿ ಆಕೆಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕೆಂದರೆ 8.6 ಕೋಟಿ ರೂ. ಪರಿಹಾರ ನೀಡುವ ಆಯ್ಕೆಗಳಿತ್ತು.
ಆದರೆ ಮಹ್ದಿ ಕುಟುಂಬ ನಿಮಿಷ ಪರಿಹಾರ ಹಣ ಸ್ವೀಕರಿಸಲು ನಿರಾಕರಿಸಿತ್ತು. ಹೀಗಾಗಿ ಗಲ್ಲು ಶಿಕ್ಷೆ ಖಾಯಂ ಆಗಿತ್ತು. ಆದರೆ ಈಗ ಕೊನೆಯ ಕ್ಷಣದಲ್ಲಿ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ನೇತೃತ್ವದಲ್ಲಿ ಸಭೆ ನಡೆಸಿ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ. ಯೆಮನ್ ಸರ್ಕಾರ ಸೂಫಿ ವಿದ್ವಾಂಸರ ಮಾತಿಗೆ ಬೆಲೆ ಕೊಡುತ್ತದೆ. ಇದೇ ಕಾರಣಕ್ಕೆ ಅವರ ಮೂಲಕ ಮಾತುಕತೆ ನಡೆಸಲಾಗಿತ್ತು. ಇದೀಗ ಮಹ್ದಿ ಕುಟುಂಬದ ಜೊತೆ ಮಾತುಕತೆ ನಡೆಸಿ ಪರಿಹಾರ ಹಣಕ್ಕೆ ಮನವೊಲಿಸಿ ನಿಮಿಷ ಪ್ರಿಯ ಜೀವ ಉಳಿಸಲು ಪ್ರಯತ್ನ ನಡೆಸಲಾಗುತ್ತಿದೆ.