ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಯಾತ್ರಿ ನಿವಾಸ್
ಆಂಜನೇಯ ಸ್ವಾಮಿ ದೇವಸ್ಥಾನವು ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳವಾಗಿದ್ದು ಈ ಸ್ಥಳದಲ್ಲಿ ಯಾತ್ರಿ ನಿವಾಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಕುರಿತು ಚರ್ಚೆ ಮೂಲಕ ಕೇಂದ್ರ ಪ್ರವಾಸೋದ್ಯಮ ಸಚಿವರ ಗಮನ ಸೆಳೆದ ಅವರು, ಈ ಕ್ಷೇತ್ರವು ರಾಮಾಯಣದ ಪ್ರಕಾರ ಹನುಮ ಜನಿಸಿದ ಸ್ಥಳವಾಗಿದ್ದು, ಇದಲ್ಲದೇ ಪ್ರತಿವರ್ಷ 70 ರಿಂದ80 ಸಾವಿರ ಹನುಮ ಮಾಲಾಧಾರಿ ಕ್ಷೇತ್ರಕ್ಕೆ ಆಗಮಿಸಿ ದರ್ಶನವನ್ನು ಪಡೆದುಕೊಳ್ಳುವರು. ಇವರಿಗೆ ತಂಗಲು ಅನುಕೂಲವಾಗುವದಕ್ಕಾಗಿ ಅತ್ಯಾಧುನಿಕ ಯಾತ್ರಿ ನಿವಾಸ್ ನಿರ್ಮಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.