ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

ಮಂಗಳವಾರ, 24 ಜನವರಿ 2023 (11:12 IST)
ಬೆಂಗಳೂರು : ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.

ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಭರ್ಜರಿ ಪ್ಲಾನ್ ಮಾಡಲಾಗುತ್ತಿದೆ. ಫೆಬ್ರವರಿ 6ರಂದು ಹೆಚ್ಎಎಲ್ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಆ ಕಾರ್ಯಕ್ರಮದ ಆಗಮನದ ವೇಳೆ ಬೆಂಗಳೂರಲ್ಲಿ ರೋಡ್ ಶೋಗೆ ರಾಜ್ಯ ಬಿಜೆಪಿ ಮನವಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಹುಬ್ಬಳ್ಳಿ ಮಾಡೆಲ್ನಲ್ಲೇ ಮೂರು ಕ್ಷೇತ್ರಗಳ ಟಾರ್ಗೆಟ್ ಮಾಡಿ ರೋಡ್ ಶೋಗೆ ತಂತ್ರ ರೂಪಿಸಲಾಗಿದೆ. ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ ಕೇಂದ್ರೀಕರಿಸಿ ರೋಡ್ ಶೋ ರೂಟ್ ಮ್ಯಾಪ್ ಮಾಡಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ