ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಸಬ್ಸಿಡಿ ಆಧಾರಿತ ಕ್ಯಾಂಟೀನ್‌ ಆರಂಭಿಸುವ ಚಿಂತನೆ…!!

ಗುರುವಾರ, 20 ಜನವರಿ 2022 (21:00 IST)
ಯೋಜನೆಯಲ್ಲಿದೆ. ಅನೇಕ ರಾಜ್ಯಗಳು ಇಂತಹ ಯೋಜನೆಗಳನ್ನು ಹೊಂದಿದೆ. ಕರ್ನಾಟಕದ ಇಂದಿರಾ ಕ್ಯಾಂಟೀನ್, ತಮಿಳು ನಾಡಿನ ಅಮ್ಮ ಕ್ಯಾಂಟೀನ್‌ನಂತೆಯೇ ಕೇಂದ್ರವೂ ಸಬ್ಸಿಡಿ ಆಹಾರ ಕ್ಯಾಂಟೀನ್‌ಗಳನ್ನು ಬೆಂಬಲಿಸುವ ಯೋಜನೆಯ ಪ್ರಸ್ತಾಪದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದೆ.
ಆದರೆ ಪ್ರಸ್ತುತ ಇರುವ ಪಿಎಂ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಮತ್ತು ಆಹಾರ ಸಬ್ಸಿಡಿ ಯೋಜನೆ ಪ್ರಸ್ತಾವನೆಯ ಸಾಧಕ-ಭಾದಕಗಳನ್ನು ತಿಳಿದುಕೊಂಡ ನಂತರ ಈ ವಿಷಯದ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಬಡವರಿಗೆ ರೂ 10 ಅಥವಾ ರೂ 15 ರ ಸಬ್ಸಿಡಿ ದರದಲ್ಲಿ ಕಡಿಮೆ ದರಕ್ಕೆ ಆಹಾರ ಲಭ್ಯವಾಗುವಂತೆ ಮಾಡುವ ಆಲೋಚನೆ ಇದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಸೂಚಿಸಿದ್ದಾರೆ.
ಇದರಡಿ ಬಳಕೆದಾರರಿಗೆ ತಮ್ಮ ಪಡಿತರ ಅಥವಾ ಆಧಾರ್ ಕಾರ್ಡ್‌ಗಳನ್ನು ತೋರಿಸಲು ಕೊಡುಗೆಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ವರದಿ ಮಾಡಿದೆ. ಬಿಜೆಪಿ ಮತ್ತು ಪಕ್ಷದ ರಾಜ್ಯ ಘಟಕಗಳಿಂದ ಇಂತಹ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರವು ಸಲಹೆಗಳನ್ನು ಸ್ವೀಕರಿಸುತ್ತಿದೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ