ಪತಿಯನ್ನು ಹುಡುಕಿ ಕೊಡಿ ಎಂದು ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ ಮಹಿಳೆ

ಬುಧವಾರ, 25 ಮೇ 2016 (16:56 IST)
ನನ್ನ ಗಂಡನ ಹುಡುಕಿ ಕೊಡಿ ಎಂದು ಮನವಿ ಸಲ್ಲಿಸಲು ಬಂದಿದ್ದ ಬಾಣಂತಿಯ ದೂರನ್ನು ಸ್ವೀಕರಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ,   ಕಮಿಷನರ್ ಕಛೇರಿಗೆ ಹೋಗಿ ದೂರು ನೀಡು ಎಂದು ಸಲಹೆ ನೀಡಿರುವುದು ಮತ್ತೆ ಸುದ್ದಿಯಾಗಿದೆ.
 
6 ವರ್ಷದ ಮಗ ಹಾಗೂ ಎರಡು ತಿಂಗಳ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದ ಬಾಣಂತಿ ಆಶಾ ಎಂಬುವರು ತಮ್ಮ ಪತಿ ತಿಪ್ಪೇಸ್ವಾಮಿ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದಾರೆ. ನನ್ನ ಪತಿ ಚಳ್ಳಕೆರೆ ಮಾಜಿ ಶಾಸಕ ತಿಪ್ಪೇಸ್ವಾಮಿ ಮತ್ತು ಶಿರಹಟ್ಟಿ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರ ಬಳಿ ಕೆಲಸ ಮಾಡುತ್ತಿದ್ದರು. ವರ್ಗಾವಣೆ ದಂಧೆ ನಡೆಸುತ್ತಿರುವ ನನ್ನ ಪತಿ, ಶಾಸಕರ ಭವನದಲ್ಲಿಯೇ ವಾಸ್ತವ್ಯ ಹೊಡಿದ್ದ ಎಂದು ಬಾಣಂತಿ ಆಶಾ ಆರೋಪಿಸಿದ್ದಾರೆ.
 
ಮುಂಜಾನೆ 6 ಗಂಟೆಯಿಂದ ಮುಖ್ಯಮಂತ್ರಿ ಭೇಟಿಗಾಗಿ ಬಾಣಂತಿ ಕಾಯುತ್ತಿದ್ದರೂ. 11 ಗಂಟೆಗೆ ಮುಖ್ಯಮಂತ್ರಿ ಅವರ ಭೇಟಿ ಅವಕಾಶ ದೊರೆತ್ತಿದ್ದು, ಅವರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾಳೆ. ಮಹಿಳೆಯ ಸಮಸ್ಯೆ ಆಲಿಸಿದ ಸಿದ್ದರಾಮಯ್ಯನವರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಅವರ ಬಳಿ ದೂರು ನೀಡುವಂತೆ ಸೂಚಿಸಿದ್ದಾರೆ.
 
ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಮಹಿಳಿಗೆ ಆಯುಕ್ತರು, ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ