ಸಂಸದರಿಗೆ ಪ್ರಧಾನಿ ಮೋದಿ ಸಲಹೆ

ಸೋಮವಾರ, 18 ಜುಲೈ 2022 (19:22 IST)
ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಸಂಸತ್ ಭವನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಂಸತ್ತು ಎನ್ನುವುದು ಪವಿತ್ರ ಸ್ಥಳ. ಯಾವುದೇ ವಿಷಯವನ್ನು ಚರ್ಚಿಸೋಣ, ಇಲ್ಲಿ ಅತ್ಯುತ್ತಮ ವಿಚಾರಗಳು ಚರ್ಚೆಯಾಗಬೇಕು. ಚರ್ಚೆಗಳಲ್ಲಿ ವಿರೋಧ ಪಕ್ಷಗಳು ಸಹ ಸಕ್ರಿಯವಾಗಿ ಭಾಗಿಯಾಗಬೇಕು. ಅರ್ಥಪೂರ್ಣ ಸಂವಾದ ನಡೆಸೋಣ. ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನಾವೀಗ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ. ದೇಶಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಸಂಸತ್ತಿನ ಹಿರಿಮೆ ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ದೇಶದ ಸ್ವಾತಂತ್ರ್ಯ ಹೋರಾಟವನ್ನು ಮತ್ತು ಅಭಿವೃದ್ಧಿಯನ್ನು ನೆನಪಿಸಿಕೊಳ್ಳುವ ಕಾಲಘಟ್ಟ ಇದು. ನಾವು ಈ ಹಂತಕ್ಕೆ ಹೇಗೆ ಬಂದೆವು ಎಂದು ಯೋಚಿಸಬೇಕು. ದೇಶಕ್ಕೆ ಸಂಸತ್ತು ಮಾರ್ಗದರ್ಶನ ಮಾಡಬೇಕು. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಹೊಸ ಉತ್ಸಾಹ ತುಂಬಲು ಸಂಸತ್ತು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ