ರಾಜ್ಯದ ಸಹಕಾರಿ ಸಾಧಕರೊಂದಿಗೆ ಪ್ರಧಾನಿ ಮೋದಿ ಸಂವಾದ

ಭಾನುವಾರ, 9 ಆಗಸ್ಟ್ 2020 (18:31 IST)
ರಾಜ್ಯದ ಸಹಕಾರಿ ಸಾಧಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ.

ಹಾಸನ‌ ಜಿಲ್ಲೆಯ ಉಗಿನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕಿಂದು ಅವಿಸ್ಮರಣೀಯ ದಿನ.

ದೇಶದ ಪ್ರಧಾನಿ ನರೇಂದ್ರ ಮೋದಿ, ಸಹಕಾರ ಸಂಘದದ ಪ್ರಗತಿ ಹಾಗೂ ರೈತ ಪರ ಕಾರ್ಯಗಳಿಗಾಗಿ ಸಂಸ್ಥೆಯನ್ನು ಗುರುತಿಸಿ ಅದರ ಪ್ರತಿನಿಧಿಗಳೊಂದಿಗೆ ನೇರ ವಿಡಿಯೋ ಸಂವಾದ ಮಾಡಿದ್ದಾರೆ.  
ಆತ್ಮ ‌ನಿರ್ಭರ್ ಅನ್ನದಾತ  ಕುರಿತ ನೇರ ಟಿ.ವಿ. ಸಂವಾದದಲ್ಲಿ ಉಗಿನೆ ಪಂಚಾಯತ್ ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಅವರೊಂದಿಗೆ ಮಾತಾನಡಿದರು. ಇದು ಇಡೀ ದೇಶದ ಗಮನ ಸೆಳೆದಿದೆ.

ಭಾಷಾಂತರಕಾರರ ನೆರವಿನೊಂದಿಗೆ ಬಸವೇಗೌಡ ಅವರೊಂದಿಗೆ ಹಿಂದಿಯಲ್ಲಿ  ಮಾತನಾಡಿದ ಪ್ರಧಾನಿ ಸಂಸ್ಥೆಯ ಪ್ರಾರಂಭ, ಬೆಳವಣಿಗೆ, ಸಾಧನೆ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ರೈತರಿಗೆ  17,500 ಕೋಟಿ ರೂ ಮೊತ್ತದ ಕಿಸಾನ್ ಉಡುಗೊರೆ ನೀಡಿದ್ದ  ಸಂದರ್ಭದಲ್ಲಿ ನಡೆಸಿದ ವಿಡಿಯೋ ಸಂವಾದದ ಜಿಲ್ಲೆಯ ರೈತರ ಕೃಷಿ ಸಂಬಂಧಿಸಿದ ವಿಷಯಗಳು, ಸಮಸ್ಯೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ