ಕಾಮುಕ ಶಿಕ್ಷಕನ ವಿರುದ್ಧ ಪೋಕ್ಸೊ ಕೇಸ್

geetha

ಶುಕ್ರವಾರ, 12 ಜನವರಿ 2024 (16:44 IST)
ಯಾದಗಿರಿ-ಯಾದಗಿರಿಯ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಕಾಮುಕ ಶಿಕ್ಷಕ ಹಣಮೇಗೌಡನ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಯಾದಗಿರಿ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಕಾಮುಕ ಶಿಕ್ಷಕ ಹಣಮೇಗೌಡ ಎರಡ್ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡ್ತಿದ್ದ. ಈಗಾಗಲೇ ಅನುಚಿತ ವರ್ತನೆ ಆರೋಪದಡಿ ಶಿಕ್ಷಕ ಹಣಮೇಗೌಡನನ್ನು ಜಿಲ್ಲಾ ಪಂಚಾಯತಿ ಸಿಇಓ ಗರೀಮಾ ಪನ್ವಾರ್ ಅಮಾನತು ಮಾಡಿ ಆದೇಶಿಸಿದ್ರು. ಅಲ್ಲದೇ ಇದೇ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಿತ್ತು.

ಅಧಿಕಾರಿಗಳ ತಂಡದ ಭೇಟಿ ವೇಳೆ ಶಾಲೆಯ ವಿದ್ಯಾರ್ಥಿನಿಯರು ಶಿಕ್ಷಕನ ಕರಾಳ ಮುಖ ಅನಾವರಣ ಮಾಡಿದ್ರು. ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಕಣ್ಣೀರಾಕುತ್ತಲೇ ಅಧಿಕಾರಿಗಳ ಮುಂದೆ ಎಲ್ಲಾ ವಿಚಾರವನ್ನ ವಿದ್ಯಾರ್ಥಿನಿಯರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ರು. ಪರಿಶೀಲನೆ ವರದಿಯ ಆಧಾರದ ಮೇಲೆ ಯಾದಗಿರಿ ಡಿಡಿಪಿಐ ಮಂಜುನಾಥ ಎಚ್.ಟಿ ಅವರಿಂದ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ