ಬೈಕ್ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹತ್ತಿಸಿದ ಪೊಲೀಸರು

ಮಂಗಳವಾರ, 13 ನವೆಂಬರ್ 2018 (18:01 IST)
ನಗರದ ತುಂಬೆಲ್ಲಾ ಜುಯ್ಯೋ ಎಂದು ಬೈಕ್ ವೀಲಿಂಗ್ ಮಾಡುವ ಪುಂಡರಿಗೆ  ಸಂಚಾರಿ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಕರ್ಕಶ ಶಬ್ದ ಮಾಡಿಕೊಂಡು ಶಬ್ದ ಮಾಲಿನ್ಯ ಜೊತೆಗೆ ವಾಯು ಮಾಲಿನ್ಯ ಮಾಡಿ ಸಾಮಾನ್ಯ ಜನರಿಗೆ ಕಿರಿಕಿರಿ ಉಂಟುಮಾಡ್ತಿದ್ರು. ಸಾರ್ವಜನಿಕರಿಂದ ಇಂತಹವರ ವಿರುದ್ಧ ದೂರು ಹೆಚ್ಚಿದರಿಂದ ಹಾಸನ ನಗರ ಸಂಚಾರಿ ಪೊಲೀಸ್ರು ಹೀಗೆ ಪುಂಡಾಟ ನೆಡೆಸೋರನ್ನ ಹಿಡಿದು ಬೈಕ್ ಗಳನ್ನ ವಶಕ್ಕೆ ತೆಗೆದುಕೊಂಡಿದ್ರು. 

ವಶಪಡಿಸಿಕೊಂಡ ಎಲ್ಲಾ ಬೈಕ್ ಗಳ ಸೈಲೆನ್ಸರ್ ಗಳನ್ನ ಬಿಚ್ಚಿ ನಡುರಸ್ತೆಯಲ್ಲಿ ಸಾಲು ಸಾಲಾಗಿ ಇಟ್ಟು ಬುಲ್ಡೋಜರ್  ಹತ್ತಿಸಿದರು. ನಜ್ಜು ಗುಜ್ಜು ಮಾಡಿ ಮತ್ತೊಮ್ಮೆ ಈ ರೀತಿ ಮಾಡಿದರೆ ಬೈಕಿನ ಮೇಲೆಯೇ ಬುಲ್ಡೋಜರ್ ಹತ್ತಿಸೋದಾಗಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇಂತಹ ಕ್ರಮ ಕೈಗೊಂಡಿರೋದು ಸಾರ್ವಜನಿಕ ವಲಯದಲ್ಲೂ ಮೆಚ್ಚಿಗೆ ವ್ಯಕ್ತವಾಗಿದೆ. ದಿನನಿತ್ಯ ರಸ್ತೆಯಲ್ಲಿ ನಡೆದಾಡೋಕು ಹೆದರಬೇಕಾದ ಪಾದಚಾರಿಗಳಿಗೆ ಸಂತೋಷ ತಂದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ