ಅತುಲ್ ಸುಭಾಷ್: ಮಾಧ್ಯಮಗಳ ಕ್ಯಾಮರಾ ಕಂಡ ಕೂಡಲೇ ಬೈದು ಓಡಿ ಹೋದ ನಿಖಿತಾ ಕುಟುಂಬ (Video)
ಉತ್ತರ ಪ್ರದೇಶ ಮೂಲದ ನಿಖಿತಾ ಗಂಡ ಅತುಲ್ ಜೊತೆಗೆ ಮನಸ್ತಾಪವಾದ ಬಳಿಕ ಮಗನೊಂದಿಗೆ ತವರಿಗೆ ಹೋಗಿದ್ದಳು. ಬಳಿಕ ಅತುಲ್ ಮೇಲೆ ಹಲವು ಕೇಸ್ ದಾಖಲಿಸಿದ್ದಳು. ಆಕೆಯ ಕೇಸ್ ಗಳು, ಕೋರ್ಟ್ ಗೆ ಅಲೆದಾಟದಿಂದ ಬೇಸತ್ತ ಅತುಲ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೀಗ ಅತುಲ್ ಮಾಡಿರುವ ಆರೋಪಗಳ ಪಟ್ಟಿಯಲ್ಲಿ ನಿಖಿತಾ ಮತ್ತು ಮನೆಯವರು ಆತನ ಸಾಮರ್ಥ್ಯಕ್ಕೆ ಮೀರಿ ಪರಿಹಾರ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ನಿಖಿತಾ ಕುಟುಂಬದವರ ಪ್ರತಿಕ್ರಿಯೆಗಾಗಿ ಮಾಧ್ಯಮದವರು ಆಕೆಯ ಮನೆ ಸಮೀಪ ಕ್ಯಾಮರಾ ಹಿಡಿದುಕೊಂಡು ತೆರಳಿದ್ದಾರೆ.
ಮಾಧ್ಯಮದವರನ್ನು ಕಂಡ ಕೂಡಲೇ ಮನೆಯ ಬಾಲ್ಕನಿಯಿಂದಲೇ ನಿಖಿತಾ ಕುಟುಂಬದವರು ಬೈದು ಓಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೂ ಮಾಧ್ಯಮಗಳು ಬೆಂಬಿಡದೇ ಹೋದಾಗ ಮನೆಗೆ ಬೀಗ ಹಾಕಿ ತಪ್ಪಿಸಿಕೊಂಡು ಬೈಕ್ ನಲ್ಲಿ ತೆರಳಿದ್ದಾರೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.