ಪೊಲೀಸರ ಗುಂಡೇಟಿನಿಂದ ಇಬ್ಬರು ಯುವಕರಿಗೆ ಗಾಯ

ಸೋಮವಾರ, 12 ಸೆಪ್ಟಂಬರ್ 2016 (19:57 IST)
ಇಬ್ಬರು ಉದ್ರಿಕ್ತರ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
 
ನಗರದ ಹೆಗ್ಗೆನಹಳ್ಳಿ ಪ್ರದೇಶದಲ್ಲಿ ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಿದ್ದ ಹಿನ್ನೆಲೆಯಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
 
ರಾಜಗೋಪಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡ ಇಬ್ಬರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
 
ಹೆಗ್ಗನಹಳ್ಳಿಯಲ್ಲಿ ಉದ್ರಿಕ್ತರು ವ್ಯಾಪಕ ಹಿಂಸಾಚಾರಾದಲ್ಲಿ ತೊಡಗಿದ್ದಲ್ಲದೇ ಪೊಲೀಸರ ಹೊಯ್ಸಳ ವಾಹನವನ್ನು ಪಲ್ಟಿ ಮಾಡಿ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಉದ್ರಿಕ್ತರನ್ನು ತಡೆಯಲು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ