ಆದ್ರೆ ನಿಜವಾದ ನಟೋರಿಯಸ್, ರೌಡಿ ಶಿಟರ್ ಹಾಗೂ ಗುಂಡಾಗಳು ಇಂದಿನ ಪೇರೆಡ್ ನಲ್ಲಿ ಕಂಡು ಬರಲಿಲ್ಲ. ಕಾಟಾಚಾರಕ್ಕೆ ನಡೆಸಿದ ರೌಡಿ ಪೇರಡ್ ಆದಂತಾಗಿದೆ. ಇನ್ನೂ ಕೇಲ ದಿನಗಳಲ್ಲಿ ಉಳಿದ ರೌಡಿಗಳಿಗೆ ಸಹ ಖಡಕ್ ಎಚ್ಚರಿಕೆ ನೀಡಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್ ಎಚ್ಚರಿಕೆ ನೀಡಿದರೂ ಸಹ ಇದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು.
ಡಿಸಿಪಿಗಳಾದ ರೇಣುಕಾ ಸುಕುಮಾರನ್, ಬಿ.ಎಸ್. ನ್ಯಾಮಗೌಡ ನೇತೃತ್ವದಲ್ಲಿ ಪರೇಡ್ ನಡೆಸಿ, ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಅವಳಿ ನಗರದ ರೌಡಿ ಶೀಟರ್ ಗಳಿಗೆ ಪಾಠ ಮಾಡಿ ಎಚ್ಚರಿಕೆ ನೀಡಿದರು. ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗುಡುಗಿದ ಅವರು ಸುಮಾರು 200 ಕ್ಕೂ ಅಧಿಕ ರೌಡಿಗಳ ಪರೇಡ್ ತೆಗೆದುಕೊಂಡ ಪೊಲೀಸ್ ಆಯುಕ್ತರು ರೌಡಿಗಳಿಗೆ ವಾರ್ನ್ ಮಾಡಿದರು.
ಚುನಾವಣಾ ಸಂದರ್ಭದಲ್ಲಿನ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಮಾಡದೆ ಶಾಂತಿಯುತವಾಗಿ ಚುನಾವಣೆ ಯಲ್ಲಿ ಭಾಗವಹಿಸಬೇಕೆಂದು ಸೂಚನೆ ನೀಡಿದರು. ಅಲ್ಲದೆ, ನೀವು ಮತದಾನ ಮಾಡಿ, ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ. ಅಪರಾಧಗಳ ಆಧಾರದ ಮೇಲೆ ವೈಯಕ್ತಿಕ ಬಾಂಡ್ ನೀಡುವಂತೆ ಸೂಚನೆ ನೀಡಿದರು. ೨ ಲಕ್ಷ ದಿಂದ ೫ ಲಕ್ಷ ರೂಪಾಯಿಗಳ ವರೆಗೂ ಬಾಂಡ್ ನೀಡಿ ನಾವು ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿ ವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ತಾಕೀತು ಮಾಡಿದರು. ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರ ಸೂಚನೆಯಿಂದ ರೌಡಿ ಶಿಟರ್ ಗಳಿಗೆ ನಡುಕ ಉಂಟಾಗಿದ್ದು, ರಾಜಕೀಯ ವಲಯದಲ್ಲಿ ಇದು ಯಾವ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.