ನಕಲಿ ಬಟ್ಟೆ ಶೇಖರಿಸಿಟ್ಟಿದ್ದ ಅಪಾರ್ಟ್ಮೆಂಟ್ ಮೇಲೆ ಪೊಲೀಸರ ರೇಡ್
ಭಾನುವಾರ, 5 ನವೆಂಬರ್ 2023 (20:32 IST)
ಬ್ರ್ಯಾಂಡೆಡ್ ಕಂಪನಿಯ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡ್ತಿದ್ದ ಕಂಪನಿಯ ಮೇಲೆ ದಾಳಿ ನಡೆಸಲಾಗಿದೆ.ಆರ್ಮಾನಿ ಬರ್ಬರಿ ಸೇರಿ ಹಲವು ಬ್ರಾಂಡ್ ಗಳ ನಕಲಿ ಬಟ್ಟೆಗಳನ್ನ ವಶಕ್ಕೆ ಪಡೆಯಲಾಗಿದೆ.
ಕೋಟ್ಯಾಂತರ ಮೌಲ್ಯದ ಬಟ್ಟೆ ಶೇಖರಣೆ ಆರೋಪಿ ಮಾಡಿದ್ದ.ಮೋಹಿತ್ ಎಂಬಾತನಿಂದ ನಕಲಿ ಬಟ್ಟೆ ಶೇಖರಣೆ ಮಾಡಿಟ್ಟಿದ್ದು,ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೇಖರಿಸಿಟ್ಟಿದ್ದ ಆರೋಪಿ ಕಂಪನಿ ಮೇಲೆ ವಿವಿಪುರಂ ಪೊಲೀಸರು ರೇಡ್ ಮಾಡಿದ್ದಾರೆ.
ವಿವಿಧ ಕಂಪನಿಗಳಿಗೆ ಸೇರಿದ ನಕಲಿ ಬಟ್ಟೆ ಶೇಖರಣೆ ಮಾಡಿಟ್ಟಿದ್ದು,ಕೆಲ ಪ್ರತಿಷ್ಠಿತ ಕಂಪನಿಯವರಿಂದ ವಿವಿಪುರಂ ಪೊಲೀಸರಿಗೆ ಮಾಹಿತಿ ಬಂದಿದ್ದು,ಇಂದು ವಿವಿಪುರಂ ಪೊಲೀಸರಿಂದ ರೇಡ್ ಮಾಡಿ ಕೋಟ್ಯಾಂತರ ರೂಪಾಯಿ ಬಟ್ಟೆ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.