ರಕ್ಷಣೆ ನೀಡಬೇಕಾಗಿದ್ದ ಪೊಲೀಸ್ ಅಧಿಕಾರಿಯಿಂದಲೇ 6 ತಿಂಗಳ ಗರ್ಭಿಣಿಯ ಮೇಲೆ ಅತ್ಯಾಚಾರ
ಭಾನುವಾರ, 7 ಅಕ್ಟೋಬರ್ 2018 (08:14 IST)
ಬಳ್ಳಾರಿ : ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸ್ ಅಧಿಕಾರಿಯೇ 6 ತಿಂಗಳ ಗರ್ಭಿಣಿಯ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಮರಿಸ್ವಾಮಿ ಎಂಬಾತ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿ. ಈತ ಶಿವಮೊಗ್ಗದ ಕೆಎಸ್ ಆರ್ ಪಿ ಬೆಟಾಲಿಯನ್ ನಲ್ಲಿ ಜಮೇದಾರನಾಗಿ ಕೆಲಸ ಮಾಡುತ್ತಿದ್ದಾನೆ. ರಜೆ ಮೇಲೆ ಹುಟ್ಟೂರು ಬಳ್ಳಾರಿಗೆ ಬಂದ ಈತ ಇಂತಹ ನೀಚ ಕೃತ್ಯ ಎಸಗಿದ್ದಾನೆ.
ತನ್ನ ಮನೆಯ ಪಕ್ಕದ ಮನೆಯಲ್ಲಿ ವಾಸವಾಗಿದ್ದ.6 ತಿಂಗಳ ಗರ್ಭಿಣಿಯ ಮೇಲೆ ಈತನ ಕಾಮದೃಷ್ಟಿ ಬಿದ್ದಿದ್ದು, ಆಕೆ ಮನೆಯಲ್ಲಿ ಒಬ್ಬಳೆ ಇದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣ ಬಳ್ಳಾರಿ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.